Wednesday, 18th September 2024

ಭಾರತ್ ಜೋಡೋ ಯಾತ್ರೆ: ಸಂಜೆ ಮಹಾರಾಷ್ಟ್ರಕ್ಕೆ ಪ್ರವೇಶ

ಕಾಮರೆಡ್ಡಿ: ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ತೆಲಂಗಾಣದ ಕಾಮರೆಡ್ಡಿಯಿಂದ ಸೋಮವಾರ ಭಾರತ್ ಜೋಡೋ ಯಾತ್ರೆ ಯನ್ನು ಪುನರ್ ಆರಂಭಿಸಿದರು.
ಸಂಜೆ ಹೊತ್ತಿಗೆ ತೆಲಂಗಾಣದಲ್ಲಿ ಯಾತ್ರೆ ಅಂತಿಮಗೊಳ್ಳಲಿದ್ದು, ಮಹಾರಾಷ್ಟ್ರ ತಲುಪಲಿದೆ. ಬೆಳಗ್ಗೆ ಕಾಮರೆಡ್ಡಿ ಜಿಲ್ಲೆಯ ಫತಾಲ್ಪುರ ಬಸ್ ನಿಲ್ದಾಣದಿಂದ ಪಾದಯಾತ್ರೆ ಪುನರ್ ಆರಂಭವಾಗಿದ್ದು, ಶೇಕಾಪುರದಲ್ಲಿ ವಿರಾಮ ಪಡೆಯಲಿದೆ. ಸಂಜೆ 5 ಗಂಟೆಗೆ ಕಾಮರೆಡ್ಡಿಯ ಮೆನೂರ್ ನಲ್ಲಿ ಸಾರ್ವಜನಿಕ ಸಭೆಯಲ್ಲಿ ರಾಹುಲ್ ಪಾಲ್ಗೊಳ್ಳುವ ಸಾಧ್ಯತೆಯಿದೆ. ನಂತರ ಮಹಾ ರಾಷ್ಟ್ರಕ್ಕೆ ತಲುಪಲಿದೆ.

ಈ ಸಂಬಂಧ ಹಿರಿಯ ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ತಮ್ಮ ಟ್ವೀಟರ್ ಖಾತೆಯೊಂದನ್ನು ಹಂಚಿಕೊಂಡಿದ್ದು, ಭಾರತವನ್ನು ಒಂದುಗೂಡಿಸುವ ಈ ಪ್ರಯಾಣ ವನ್ನು ಆಚರಿಸಲು ಒಂದು ಪರಿಪೂರ್ಣ ಮೈಲಿಗಲ್ಲು ಎಂದಿದ್ದಾರೆ.