Monday, 16th September 2024

ಕೇರಳ: ಅಲಫ್ಪುಜಾದಿಂದ ಭಾರತ್ ಜೋಡೊ ಯಾತ್ರೆ ಆರಂಭ

ತಿರುವನಂತಪುರಂ: ಭಾರತ್ ಜೋಡೊ ಯಾತ್ರೆಯ 12ನೇ ದಿನ ಸೋಮವಾರ ರಾಹುಲ್ ಗಾಂಧಿ ಕೇರಳದ ಅಲಫ್ಪುಜಾದಿಂದ ಪಾದಯಾತ್ರೆ ಆರಂಭಿಸಿದರು.

ಹಾದಿ ಮಧ್ಯೆ ವಡಕ್ಕಾಲ್ ಬೀಚ್ ಬಳಿಯ ಮೀನುಗಾರರನ್ನು ಭೇಟಿ ಮಾಡಿದ ರಾಹುಲ್ ಗಾಂಧಿ ಸಮಾಲೋಚನೆ ನಡೆಸಿದ್ದು, ಇಂಧನ ದರ ಏರಿಕೆ, ಸಾಮಾ ಜಿಕ ನೀತಿ ಕೊರತೆ, ಮೀನು ದಾಸ್ತಾನು ಶಿಥೀಲಿಕರಣ, ಶಿಕ್ಷಣದ ಸಮಸ್ಯೆ ಕುರಿತು ಮೀನುಗಾರರು ವಿವರಣೆ ನೀಡಿದರು.

ಈ ಹೆಜ್ಜೆಗಳು ನಿಲ್ಲುವುದಿಲ್ಲ. ಭಾರತವನ್ನು ಪುನರ್ ಜೋಡಣೆ ಮಾಡಲಿದೆ ಎಂದು ಕಾಂಗ್ರೆಸ್ ಟ್ವಿಟ್‍ನಲ್ಲಿ ತಿಳಿಸಿದೆ. ಗಾಂಧೀಜಿ ವೇಷಧಾರಿಯೊಬ್ಬರು ಪಾದಯಾತ್ರೆಯಲ್ಲಿ ಕಾಣಿಸಿಕೊಂಡಿದ್ದು, ದೇಶದ ಭಾವೈಕ್ಯತೆಗೆ ಧಕ್ಕೆಯಾದಾಗಲೆಲ್ಲ ಗಾಂಧೀಜಿ ಮರು ಸಂಪರ್ಕಿಸುವ ಕೆಲಸ ಮಾಡುತ್ತಾರೆ ಎಂದು ಟ್ವೀಟ್‍ನಲ್ಲಿ ತಿಳಿಸಲಾಗಿದೆ.

ಹಾದಿ ಮಧ್ಯೆ ಯುವಕ ತಂಡವೊಂದು ಸಾಂಸ್ಕøತಿಕ ನೃತ್ಯ ಹಾಗೂ ಬೀದಿನಾಟಕಗಳ ಮೂಲಕ ದೇಶ ಎದುರಿಸುತ್ತಿರುವ ಸಮಸ್ಯೆಗಳನ್ನು ಬಿಂಬಿಸುವ ಪ್ರದರ್ಶನ ನೀಡಿತ್ತು. ಇದನ್ನು ರಾಹುಲ್ ಗಾಂಧಿ ಖುದ್ದಾಗಿ ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದರು.

ಎಂದಿನಂತೆ ಭಾರತ್ ಜೋಡೊ ಯಾತ್ರೆಗೆ ಅಪಾರ ಪ್ರಮಾಣದ ಜನಸ್ತೋಮದ ಬೆಂಬಲ ದೊರೆತಿದೆ.