Thursday, 19th September 2024

ಸೋಹ್ನಾದಿಂದ ಭಾರತ್ ಜೋಡೋ ಯಾತ್ರೆ ಪುನರಾರಂಭ

ಚಂಡೀಗಢ: ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆ ಶುಕ್ರವಾರ ಹರಿಯಾಣದ ಸೋಹ್ನಾದಲ್ಲಿ ರುವ ಖೇರ್ಲಿ ಲಾಲಾದಿಂದ ಪುನರಾರಂಭವಾಗಿದೆ.

ಇನ್ನು, ಭಾರತ್ ಜೋಡೋ ಯಾತ್ರೆ ಡಿಸೆಂಬರ್ 24 (ಶನಿವಾರ) ರಂದು ರಾಷ್ಟ್ರ ರಾಜ ಧಾನಿ ದೆಹಲಿಗೆ ಪ್ರವೇಶಿಸಲಿದೆ. ಶನಿವಾರದ ಯಾತ್ರೆಯಲ್ಲಿ ಮಕ್ಕಳ್ ನಿಧಿ ಮೈಯಂ ಪಕ್ಷದ ನಾಯಕ, ನಟ ಕಮಲ್ ಹಾಸನ್ ಭಾಗವಹಿಸುವ ನಿರೀಕ್ಷೆಯಿದೆ.

ಭಾರತ್ ಜೋಡೋ ಯಾತ್ರೆಯು ಬಾದರ್‌ಪುರ ಗಡಿಯ ಮೂಲಕ ಶನಿವಾರ ದೆಹಲಿ ಯನ್ನು ಪ್ರವೇಶಿಸಲಿದೆ. ಯಾತ್ರೆಯಲ್ಲಿ ಭಾಗವಹಿಸುವವರು ಮಥುರಾ ರಸ್ತೆಯ ಮೂಲಕ ಆಶ್ರಮದ ಕಡೆಗೆ ನಡೆದು ಜಾಕಿರ್ ಹುಸೇನ್ ಮಾರ್ಗ, ಇಂಡಿಯಾ ಗೇಟ್, ತಿಲಕ್ ಮಾರ್ಗ ಮತ್ತು ಕೆಂಪು ಕೋಟೆಗೆ ತಲುಪಲಿದ್ದಾರೆ.

ಕೆಂಪು ಕೋಟೆಯಿಂದ, ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ನಾಯಕರ ಗುಂಪು ನೇತಾಜಿ ಸುಭಾಷ್ ಮಾರ್ಗದ ಮೂಲಕ ರಾಜ್ ಘಾಟ್‌ಗೆ ರಾಷ್ಟ್ರೀಯ ನಾಯಕರಿಗೆ ನಮನ ಸಲ್ಲಿಸಲಿದೆ ಎಂದು ದೆಹಲಿ ಕಾಂಗ್ರೆಸ್ ನಾಯಕರು ತಿಳಿಸಿದ್ದಾರೆ.

ಪಾದಯಾತ್ರೆಯಿಂದಾಗಿ ರಾಜಧಾನಿಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯಾಗುವ ಸಾಧ್ಯತೆ ಇದೆ. ಯಾತ್ರೆಗಾಗಿ ರಿಂಗ್ ರೋಡ್ ಬಳಸುವಂತೆ ಕಾಂಗ್ರೆಸ್ ಮುಖಂಡರಿಗೆ ಮನವಿ ಮಾಡಿರುವುದಾಗಿ ಸಂಚಾರ ಪೊಲೀಸರು ತಿಳಿಸಿದ್ದಾರೆ.

ದೆಹಲಿಯ ವಿವಿಧ ಭಾಗಗಳಿಂದ ಸುಮಾರು 40,000 ಜನರು ಮೆರವಣಿಗೆಯಲ್ಲಿ ಸೇರಲು ಅರ್ಜಿಗಳನ್ನು ಭರ್ತಿ ಮಾಡಿದ್ದಾರೆ ಎಂದು ದೆಹಲಿ ಕಾಂಗ್ರೆಸ್‌ನ ಸಂವಹನ ವಿಭಾಗದ ಅಧ್ಯಕ್ಷ ಅನಿಲ್ ಭಾರದ್ವಾಜ್ ಹೇಳಿದ್ದಾರೆ. “ರಾಹುಲ್ ಗಾಂಧಿ ಅವರನ್ನು ಬಾದರ್‌ಪುರ ಗಡಿಯಲ್ಲಿ ಹಲವಾರು ಹಿರಿಯ ಕಾಂಗ್ರೆಸ್ ನಾಯಕರು ಸ್ವಾಗತಿಸಲಿದ್ದಾರೆ.

ಇತ್ತ, ಚೀನಾದಲ್ಲಿ ಮತ್ತೆ ಕಾಣಿಸಿಕೊಂಡಿರುವ ಕೊರೊನಾ ಕಾರಣದಿಂದ ದೇಶದಲ್ಲಿ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲಾಗು ತ್ತಿದ್ದು, ಆರೋಗ್ಯ ಸಚಿವ ಯಾತ್ರೆಯನ್ನು ನಿಲ್ಲಿಸುವಂತೆ ಮನವಿ ಮಾಡಿದ್ದರು, ಇದಕ್ಕೆ ಕಾಂಗ್ರೆಸ್ ಆಕ್ಷೇಪಿಸಿದೆ.

ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಮತ್ತು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರಿಗೆ ಪತ್ರ ಬರೆದಿರುವ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ, ಪಕ್ಷದ ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಕೋವಿಡ್ ಮಾರ್ಗ ಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವಂತೆ ಕೇಳಿಕೊಂಡಿದ್ದಾರೆ.
Read E-Paper click here