Saturday, 14th December 2024

ಆಗಸ್ಟ್.21ರಂದು ಭಾರತ್ ಬಂದ್ ಗೆ ಕರೆ

ವದೆಹಲಿ: ಸುಪ್ರೀಂ ಕೋರ್ಟ್ ನಿಂದ ಎಸ್ಸಿ, ಎಸ್ಟಿ ಮೀಸಲಾತಿಗೆ ಸಂಬಂಧಿಸಿದಂತೆ ಕೆಲ ದಿನಗಳ ಹಿಂದೆ ಮಹತ್ವದ ತೀರ್ಪು ನೀಡಲಾಗಿತ್ತು. ಈ ತೀರ್ಪು ವಿರೋಧಿಸಿ ಆಗಸ್ಟ್.21ರಂದು ಭಾರತ್ ಬಂದ್ ಗೆ ಕರೆ ನೀಡಲಾಗಿದೆ.

ವಿವಿಧ ದಲಿತ ಸಂಘಟನೆಗಳು ಭಾರತ್ ಬಂದ್ ಗೆ ಕರೆ ನೀಡಿದ್ದು, ಪತ್ರದ ಮೂಲಕ ಆಗಸ್ಟ್.21ರಂದು ಭಾರತ್ ಬಂದ್ ನಡೆಸಲಾಗುವುದು ಎಂಬುದಾಗಿ ಅಧಿಕೃತ ಮಾಹಿತಿ ತಿಳಿಸಿವೆ.

ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಮೀಸಲಾತಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ವಿರೋಧಿಸಿ ಆ.21ರಂದು ಬೆಳಿಗ್ಗೆ 5 ಗಂಟೆ ಯಿಂದ ಸಂಜೆ 5 ಗಂಟೆಯವರೆಗೆ ಭಾರತ್ ಬಂದ್ ನಡೆಸಲಾಗುತ್ತಿದೆ. ಇದರಲ್ಲಿ ವಿವಿಧ ಸಂಘಟನೆಗಳು ಭಾಗಿಯಾಗಲಿದ್ದಾವೆ ಎಂಬುದಾಗಿ ಸರ್ವ ಆದಿವಾಸಿ ಸಮಾಜದ ವಿಭಾಗೀಯ ಅಧ್ಯಕ್ಷ ಪ್ರಕಾಶ್ ಠಾಕೋರ್ ತಿಳಿಸಿದ್ದಾರೆ.