ಧುಬ್ರಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ‘ಭಾರತ ಜೋಡೊ ನ್ಯಾಯಯಾತ್ರೆ’ ಗುರುವಾರ ಅಸ್ಸಾಂನಲ್ಲಿ ತನ್ನ ಪ್ರಯಾಣವನ್ನು ಮುಕ್ತಾಯಗೊಳಿಸಿ, ಗೋಲಕ್‌ಗಂಜ್ ಮೂಲಕ ಪಶ್ಚಿಮ ಬಂಗಾಳವನ್ನು ಪ್ರವೇಶಿಸಿದೆ.
ರಾಹುಲ್ ಗಾಂಧಿ ಅಸ್ಸಾಂನಲ್ಲಿ ಇಂದು ತಮ್ಮ 8ನೇ ಮತ್ತು ಕೊನೆಯ ದಿನದ ಯಾತ್ರೆಯ ಭಾಗವಾಗಿ ವಾಹನದಲ್ಲಿ ಸ್ವಲ್ಪ ದೂರದವರೆಗೆ ಸಾಗಿದರು.
ಬಳಿಕ ಗೋಲಕ್‌ಗಂಜ್ ತಲುಪಲು ಬಸ್ ಹತ್ತಿದರು.
ಕಾಂಗ್ರೆಸ್ ನಾಯಕನನ್ನು ನೋಡಲು ಹೆಚ್ಚಿನ ಸಂಖ್ಯೆಯ ಜನರು ಪ್ರಯಾಣದ ಮಾರ್ಗದಲ್ಲಿ ಕಾಯುತ್ತಿದ್ದರು. ರಾಹುಲ್ ಹಿರಿಯ ನಾಯಕರೊಂದಿಗೆ ಸ್ಥಳೀಯ ಸ್ಟಾಲ್‌ನಲ್ಲಿ ಚಹಾ ಸವಿದರು. ಬಳಿಕ ಗೋಲಕ್‌ಗಂಜ್ ಪಟ್ಟಣದಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗದ ಜನರೊಂದಿಗೆ ಸಂವಹನ ನಡೆಸಿದರು ಎಂದು ವಿಪಕ್ಷದ ನಾಯಕ ದೇಬಬ್ರತ ಸೈಕಿಯಾ ಹೇಳಿದರು ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.
ರಾಹುಲ್ ನೇತೃತ್ವದ ನ್ಯಾಯ ಯಾತ್ರೆ ಜ.14 ರಂದು ಮಣಿಪುರದಲ್ಲಿ ಪ್ರಾರಂಭವಾಗಿದ್ದು, ಮಾರ್ಚ್ 20 ರಂದು ಮುಂಬೈನಲ್ಲಿ ಮುಕ್ತಾಯಗೊಳ್ಳಲಿದೆ.