Friday, 22nd November 2024

ಭಾರತ್​ ಜೋಡೋ ಯಾತ್ರೆ: ಚಳಿಯಲ್ಲೂ ಅಂಗಿ ಬಿಚ್ಚಿ ಕುಣಿದ ಕಾರ್ಯಕರ್ತರು

ರ್ನಾಲ್​: ಕಾಂಗ್ರೆಸ್​ನ ಭಾರತ್​ ಜೋಡೋ ಯಾತ್ರೆ ಈಗ ಹರಿಯಾಣದಲ್ಲಿ ನಡೆಯುತ್ತಿದೆ. ಈ ಮಧ್ಯೆ ಗಮನ ಸೆಳೆದಿದ್ದು ಕಾಂಗ್ರೆಸ್ ಕಾರ್ಯಕರ್ತರ ನೃತ್ಯ. ಹರಿಯಾಣದ ಕರ್ನಾಲ್​ನಲ್ಲಿ ಭಾರತ್ ಜೋಡೋ ಯಾತ್ರೆ ಮಧ್ಯೆ ಕಾರ್ಯಕರ್ತರು ಅಂಗಿಬಿಚ್ಚಿಕೊಂಡು ಕುಣಿ ದಿದ್ದಾರೆ.

ದೇಹದ ರಕ್ತ ಹೆಪ್ಪುಗಟ್ಟುವಷ್ಟು ಶೀತವಿದೆ. ಅದರ ನಡುವೆಯೇ ಕಾಂಗ್ರೆಸ್​ ಕಾರ್ಯಕರ್ತರು ಶರ್ಟ್​​ ಬಿಚ್ಚಿ, ಬಸ್​ ಮೇಲೆ ಹತ್ತಿ ನಿಂತು ಕುಣಿದಿದ್ದಾರೆ. ಕೈಯಲ್ಲಿ ಕಾಂಗ್ರೆಸ್ ಬಾವುಟ ಹಿಡಿದಿದ್ದಾರೆ. ದೊಡ್ಡದಾಗಿ ಕೂಗುತ್ತ ಬಸ್ಕಿ ತೆಗೆಯುತ್ತಿದ್ದಾರೆ.

ಭಾರತ್​ ಜೋಡೋ ಯಾತ್ರೆ ಉತ್ತರ ಪ್ರದೇಶದಿಂದ ಹರಿಯಾಣಕ್ಕೆ ಕಾಲಿಟ್ಟಿದೆ. ಈ ಭಾಗ ದಲ್ಲೆಲ್ಲ ಈಗ ಚಳಿಯ ಅಬ್ಬರ. ಅದರ ಮಧ್ಯೆ ರಾಹುಲ್ ಗಾಂಧಿ ಕೂಡ ಒಂದು ಟಿ ಶರ್ಟ್ ಹಾಕಿಕೊಂಡು ಪಾದಯಾತ್ರೆ ನಡೆಸುತ್ತಿದ್ದಾರೆ. ಮಾಧ್ಯಮದವರು ರಾಹುಲ್ ಗಾಂಧಿಯನ್ನು ಪ್ರಶ್ನಿಸಿದ್ದರು. ಅದಕ್ಕೆ ಉತ್ತರಿಸಿದ್ದ ರಾಹುಲ್ ಗಾಂಧಿ ‘ಈ ದೇಶದಲ್ಲಿ ರೈತರು, ಕೂಲಿ ಕಾರ್ಮಿಕರು, ಶ್ರಮಿಕರು ಚಳಿ-ಮಳೆಯಲ್ಲಿ ನಡುಗುತ್ತ, ಬಿಸಿಲಲ್ಲಿ ಬೇಯುತ್ತಿದ್ದಾರೆ.

ಬರೀ ಟಿ ಶರ್ಟ್​​ನಲ್ಲಿಯೇ ಇದ್ದರೂ ನನಗೆ ಚಳಿಯಾಗುವುದಿಲ್ಲ’ ಎಂದು ಹೇಳಿದ್ದರು. ಇನ್ನು ತನ್ನ ಅಣ್ಣ ಯಾಕೆ ಇಷ್ಟು ಚಳಿ ಯಲ್ಲೂ ಬರಿ ಟಿ ಶರ್ಟ್ ಧರಿಸಿ ಪಾದಯಾತ್ರೆ ನಡೆಸುತ್ತಿದ್ದಾರೆ ಎಂಬುದಕ್ಕೆ ಉತ್ತರಿಸಿದ್ದ ಪ್ರಿಯಾಂಕಾ ಗಾಂಧಿ ,’ರಾಹುಲ್ ಗಾಂಧಿ ಯವರು ಸತ್ಯದ ಹೊದಿಕೆ ಹೊದ್ದಿದ್ದಾರೆ. ಹಾಗಾಗಿ ಒಂದು ಟಿ ಶರ್ಟ್ ಧರಿಸಿ ಪಾದಯಾತ್ರೆ ನಡೆಸುತ್ತಿದ್ದರೂ ಅವರಿಗೆ ಚಳಿಯಾ ಗುತ್ತಿಲ್ಲ’ ಎಂದಿದ್ದರು.

ಸೆಪ್ಟೆಂಬರ್​​ನಿಂದ ಪ್ರಾರಂಭವಾದ ಭಾರತ್ ಜೋಡೋ ಯಾತ್ರೆ ಜನವರಿ 10ರಂದು ಪಂಜಾಬ್ ಪ್ರವೇಶಿಸಲಿದೆ.
Read E-Paper click here