Saturday, 14th December 2024

ಯಾತ್ರೆಗೆ ಶುಭ ಕೋರಿದ ರಾಮಜನ್ಮಭೂಮಿ ದೇವಸ್ಥಾನದ ಮುಖ್ಯ ಅರ್ಚಕ

ಅಯೋಧ್ಯೆ: ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಉತ್ತರ ಪ್ರದೇಶಕ್ಕೆ ಪ್ರವೇಶಿಸುವ ಮುನ್ನ, ಅಯೋಧ್ಯೆಯ ರಾಮಜನ್ಮಭೂಮಿ ದೇವಸ್ಥಾನದ ಮುಖ್ಯ ಅರ್ಚಕರು ಶ್ರೀರಾಮನ ಆಶೀರ್ವಾದ ಯಾವಾ ಗಲೂ ಅವರ ಮೇಲೆ ಇರಲಿ ಎಂದು ಹಾರೈಸಿದ್ದಾರೆ.

ರಾಹುಲ್ ಗಾಂಧಿಗೆ ಬರೆದ ಪತ್ರದಲ್ಲಿ, ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರದಾಸ್ ಅವರು, ದೇಶವನ್ನು ಒಗ್ಗೂಡಿಸುವ ರಾಹುಲ್ ಕ್ರಮದ ಬಗ್ಗೆ ತಮ್ಮ ಬೆಂಬಲ ನೀಡಿದರು.

“ನೀವು ಹೋರಾಡುತ್ತಿರುವ ಮಿಷನ್ ಯಶಸ್ವಿಯಾಗಲಿ ಎಂದು ಭಾವಿಸುತ್ತೇನೆ ಮತ್ತು ಪ್ರಾರ್ಥಿಸುತ್ತೇನೆ. ನಿಮ್ಮ ದೀರ್ಘಾಯುಷ್ಯಕ್ಕಾಗಿ ನಿಮ್ಮನ್ನು ಆಶೀರ್ವದಿಸುತ್ತೇನೆ” ಎಂದು ಪತ್ರದಲ್ಲಿ ಬರೆದಿದ್ದು ಅದನ್ನು ಹಂಚಿಕೊಂಡಿದ್ದಾರೆ.

“ನೀವು ಜನರ ಹಿತಾಸಕ್ತಿ ಮತ್ತು ಜನರ ಸಂತೋಷಕ್ಕಾಗಿ ‘ಸರ್ವಜನ್ ಹಿತೈ ಸರ್ವಜನ್ ಸುಖೇ’ ಎಂಬ ಉದಾತ್ತ ಉದ್ದೇಶಕ್ಕಾಗಿ ಕೆಲಸ ಮಾಡುತ್ತಿದ್ದೀರಿ, ಶ್ರೀರಾಮನ ಆಶೀರ್ವಾದ ಯಾವಾಗಲೂ ನಿಮ್ಮ ಮೇಲೆ ಇರಲಿ ಎಂದು ನಾನು ಬಯಸುತ್ತೇನೆ” ಎಂದು ಪತ್ರದಲ್ಲಿ ಬರೆಯಲಾಗಿದೆ.

ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆ ಮಧ್ಯಾಹ್ನ ಉತ್ತರ ಪ್ರದೇಶದ ಘಾಜಿಯಾಬಾದ್‌ಗೆ ಪ್ರವೇಶಿಸಿ ಬಾಗ್‌ಪತ್‌ನ ಮಾವಿಕಲಾ ಗ್ರಾಮದಲ್ಲಿ ರಾತ್ರಿ ತಂಗಲಿದೆ. ನಂತರ ಜನವರಿ 4 ರಂದು ಶಾಮ್ಲಿ ಮೂಲಕ ಹಾದುಹೋಗಲು ನಿರ್ಧರಿಸಲಾಗಿದೆ.

ಪ್ರಮುಖ ವಿಪಕ್ಷಗಳಾದ ಎಸ್‌ಪಿ ಮತ್ತು ಬಿಎಸ್‌ಪಿ ಕೂಡ ಯಾತ್ರೆಗೆ ಶುಭ ಹಾರೈಸಿವೆ. ಆದರೆ ಯಾತ್ರೆಯಿಂದ ದೂರವಿರಲು ನಿರ್ಧರಿಸಿವೆ.

Read E-Paper click here