Friday, 22nd November 2024

ಉಸಿರಾಟದ ತೊಂದರೆ: ಕೋಕಿಲಾಬೆನ್ ಆಸ್ಪತ್ರೆಗೆ ದಾಖಲಾದ ಪ್ರಗ್ಯಾ ಠಾಕೂರ್

ಮುಂಬೈ : ಉಸಿರಾಟದ ತೊಂದರೆ ಕಾಣಿಸಿಕೊಂಡ ಕಾರಣ, ಭೋಪಾಲ್ ಬಿಜೆಪಿ ಸಂಸದೆ ಪ್ರಗ್ಯಾ ಠಾಕೂರ್ ಅವರಿಗೆ ವಿಮಾನದ ಮೂಲಕ ಮುಂಬೈನ ಕೋಕಿಲಬೆನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸಾಧ್ವಿ ಪ್ರಗ್ಯಾ ಕಳೆದ ಫೆ. 19ರಂದು ತೊಂದರೆಯಿಂದ ಬಳಲಿದ್ದು, ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಇದಾದ ಮೇಲೆ ಪ್ರಾಗ್ಯಾ ಅವರ ಆರೋಗ್ಯದ ಮೇಲೆ ನಿಗಾ ವಹಿಸಲಾಗಿತ್ತು. ಭೋಪಾಲ್ ನ‌ಲ್ಲಿ ನಡೆದ 2019 ರ ಲೋಕಸಭಾ ಚುನಾವಣೆಯಲ್ಲಿ ಪ್ರಗ್ಯಾ, ದಿಗ್ವಿಜಯ ಸಿಂಗ್ ರನ್ನು 3.6 ಲಕ್ಷ ಮತಗಳಿಂದ ಸೋಲಿಸಿ ಗೆಲುವು ಸಾಧಿಸಿದ್ದರು.

ಮಲೆಗಾಂಗ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿಗಳಲ್ಲೊಬ್ಬರಾಗಿದ್ದ ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ ಅವರಿಗೆ ಬಾಂಬೆ ಹೈಕೋರ್ಟ್ ಜಾಮೀನು ನೀಡಿತ್ತು.