Sunday, 15th December 2024

36 ಗಂಟೆಗಳ ಕಾಲ ನಿರಂತರ ಕೆಲಸ: ಕಿರಿಯ ವೈದ್ಯೆ ಆತ್ಮಹತ್ಯೆ

ಭೋಪಾಲ್‌: ಭೋಪಾಲ್‌ನ ಗಾಂಧಿ ವೈದ್ಯಕೀಯ ಕಾಲೇಜಿನಲ್ಲಿ ಹಿರಿಯ ವೈದ್ಯಾಧಿಕಾರಿ ಗಳ ಹಿಂಸೆಗೆ ಬೇಸತ್ತು ಕಿರಿಯ ವೈದ್ಯೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

36 ಗಂಟೆಗಳ ಕಾಲ ನಿರಂತರ ಕೆಲಸ ಮಾಡುವಂತೆ ಇಲಾಖೆಯ ಮೂವರು ಹಿರಿಯ ಮಹಿಳಾ ವೈದ್ಯರು ಕಿರಿಯ ವೈದ್ಯೆ ಬಾಲ ಸರಸ್ವತಿಗೆ ಹಿಂಸೆ ನೀಡುತ್ತಿದ್ದರಂತೆ. ಸೋಮ ವಾರ ಮನೆಯ ಪೂಜಾ ಕೋಣೆಯಲ್ಲಿ ಆಕೆಯ ಶವ ಪತ್ತೆಯಾದಾಗ ಘಟನೆ ಬೆಳಕಿಗೆ ಬಂದಿದೆ.

ಮೃತ ಸರಸ್ವತಿ ತಮ್ಮ ಇಲಾಖೆಯ ಮೂವರು ಹಿರಿಯ ಮಹಿಳಾ ವೈದ್ಯರಿಂದ ಅಪಾರ ಒತ್ತಡ ಮತ್ತು ನಿಂದನೆಗಳನ್ನು ಸಹಿಸಿ ಕೊಳ್ಳುತ್ತಿದ್ದರು ಎಂದು ಅವರ ಪತಿ ಆರೋಪಿಸಿ ದ್ದಾರೆ.

ತನ್ನ ಕಿರಿಯರ ಮುಂದೆ ತನ್ನನ್ನು ಅವಮಾನಿಸಿ, ಸೋಮಾರಿ ಎಂಬ ಹಣೆಪಟ್ಟಿ ಕಟ್ಟ ಲಾಗಿದೆ ಎಂದು ಆಕೆಯ ಪತಿ ಜೈ ವರ್ಧನ್ ಚೌಧರಿ ಹೇಳಿದ್ದಾರೆ. ಭೋಪಾಲ್​​​ ನಗರದ ಶವಾಗಾರದ ಮುಂದೆ ಜಮಾಯಿಸಿದ ಕುಟುಂಬಸ್ಥರು ಮತ್ತು ಸ್ನೇಹಿತರು ಸರಸ್ವತಿಯ ಸಾವಿಗೆ ನ್ಯಾಯಕ್ಕಾಗಿ ಒತ್ತಾಯಿಸಿದರು.

ಆರೋಪಿ ಹಿರಿಯ ವೈದ್ಯರ ವಿರುದ್ಧ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ದುರಂತ ಘಟನೆಗೆ ಪ್ರತಿಕ್ರಿಯೆಯಾಗಿ, ಸ್ತ್ರೀರೋಗ ವಿಭಾಗದ ಎಲ್ಲಾ ಕಿರಿಯ ವೈದ್ಯರು ಮುಷ್ಕರ ಕೈಗೊಂಡಿದ್ದಾರೆ.