Sunday, 15th December 2024

ರೈಲಿನ ಬೋಗಿಯ ಬ್ಯಾಟರಿ ಬಾಕ್ಸ್ ನಲ್ಲಿ ಬೆಂಕಿ

ಭೋಪಾಲ್: ಭೋಪಾಲ್’ನಿಂದ ನವದೆಹಲಿಗೆ ತೆರಳುತ್ತಿದ್ದ ವಂದೇ ಭಾರತ್ ರೈಲಿನ ಒಂದು ಬೋಗಿಯ ಬ್ಯಾಟರಿ ಬಾಕ್ಸ್ ನಲ್ಲಿ ಸೋಮವಾರ ಬೆಳಗ್ಗೆ ಬೆಂಕಿ ಕಾಣಿಸಿಕೊಂಡಿದೆ.
ಅವಘಡ ಸಂಭವಿಸಿದಾಗ ಕೋಚ್ನಲ್ಲಿದ್ದ ಪ್ರಯಾಣಿಕರನ್ನು ತಕ್ಷಣವೇ ಬೇರೆ ಕೋಚ್ ಗಳಿಗೆ ಸ್ಥಳಾಂತರಿಸಲಾಗಿದ್ದು, ಯಾವುದೇ ಪ್ರಾಣಹಾನಿಯಾಗಿಲ್ಲ ಅಧಿಕಾರಿಗಳು ತಿಳಿಸಿರುವುದಾಗಿ ವರದಿ ಮಾಡಿದೆ.
ರಾಣಿ ಕಮಲಾಪತಿ-ಹಜರತ್ ನಿಜಾಮುದ್ದೀನ್ ವಂದೇ ಭಾರತ್ ರೈಲಿನ ಸಿ-12 ಕೋಚ್ನ ಬ್ಯಾಟರಿ ಬಾಕ್ಸ್ನಲ್ಲಿ ಬೆಂಕಿಯನ್ನು ಕೆಲ ರೈಲು ಸಿಬ್ಬಂದಿ ಗಮನಿಸಿದ ನಂತರ ತಕ್ಷಣವೇ ವಿದಿಶಾ ಜಿಲ್ಲೆಯ ಕುರ್ವೈ ಮತ್ತು ಕೈಥೋರಾ ನಿಲ್ದಾಣಗಳ ನಡುವೆ ನಿಲ್ಲಿಸಲಾ ಯಿತು ಎಂದು ಹೇಳಿದರು.
ತಕ್ಷಣವೇ ಬೆಂಕಿಯನ್ನು ಹತೋಟಿಗೆ ತರಲಾಯಿತು. ರೈಲ್ವೆ ಸಿಬ್ಬಂದಿ ದುರಸ್ತಿ ಕಾರ್ಯ ನಡೆಸುತ್ತಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.