Tuesday, 17th September 2024

ಪ್ರೇಯಸಿಗೆ ಗುಂಡು ಹಾರಿಸಿ ಪ್ರಿಯತಮ ನೇಣಿಗೆ ಶರಣು

ಭೋಪಾಲ್: ಮಧ್ಯಪ್ರದೇಶದ ಮೊರೆನಾ ಪ್ರದೇಶದಲ್ಲಿ ಪೋಷಕರು ಹೇಳಿದ ಹುಡುಗನನ್ನು ಮದುವೆಯಾಗಲು ಹೊರಟ ಪ್ರೇಯಸಿಯನ್ನು ಗುಂಡು ಹಾರಿಸಿ ನಂತರ ಪ್ರಿಯತಮ ನೇಣಿಗೆ ಶರಣಾಗಿದ್ದಾನೆ.

ಉತ್ತರಪ್ರದೇಶ ಝಾನ್ಸಿಯ ದೀಪಕ್ ಗೌತಮ್ ಹಾಗೂ ಮಧ್ಯಪ್ರದೇಶದ ಧಾತಿಯಾ ಜಿಲ್ಲೆಯ ಬರ್ಗಯಾನ್ ಗ್ರಾಮದ ನಿವಾಸಿ ಕಾಜಲ್ ಇಬ್ಬರು ಪರಸ್ಪರ ಪ್ರೀತಿ ಮಾಡುತ್ತಿದ್ದರು. ಆದರೆ ಮನೆಯಲ್ಲಿ ಇವರಿಬ್ಬರ ಪ್ರೀತಿಗೆ ಒಪ್ಪಿಗೆ ಇರಲಿಲ್ಲ.

ಹೀಗಾಗಿ ಪರಸ್ಪರ ಪ್ರೀತಿ ಮಾಡುತ್ತಿದ್ದ ಈ ಯುವ ಜೋಡಿ ಮದುವೆಯಾಗಲು ತೀರ್ಮಾನಿಸಿ ಮನೆಯನ್ನು ತೊರೆದಿತ್ತು. ಬಳಿಕ ಅವರನ್ನು ಮನೆಗೆ ಕರೆ ತಂದು ಬುದ್ಧಿ ಹೇಳಲಾಗಿತ್ತು. ಮನೆಗೆ ಬಂದ ಮಗಳಿಗೆ ತಿಳಿ ಹೇಳಿದ ಬಳಿಕ ಮಗಳು ಪೋಷಕರು ಹೇಳಿದ ಹುಡುಗನನ್ನು ಮದುವೆಯಾಗಲು ಒಪ್ಪಿಗೆ ಸೂಚಿಸಿದ್ದಳು.

ಆದರೆ ಪ್ರಿಯಕರ ಗೌತಮ್‌ಗೆ ಕಾಜಲ್ ನನ್ನು ಮರೆಯಲು ಸಾಧ್ಯವಾಗಿಲ್ಲ. ಹೀಗಾಗಿ ತನ್ನೊಂದಿಗೆ ಬರಲು ಕಾಜಲ್‌ಗೆ ಒತ್ತಾಯಿಸಿದ್ದಾನೆ. ಆದರೆ ಕಾಜಲ್ ಇದಕ್ಕೆ ಒಪ್ಪಿಗೆ ಸೂಚಿಸಿಲ್ಲ. ಬದಲಿಗೆ ಪೋಷಕರು ತೋರಿಸಿದ ಹುಡುಗನನ್ನು ಮದುವೆಯಾಗಲು ನಿರ್ಧರಿಸಿದ್ದಾಳೆ.

Leave a Reply

Your email address will not be published. Required fields are marked *