ಲಖನೌ: ಲಖಿಂಪುರದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದು, ನಾನು ಆಚೆ ಹೋಗು ತ್ತಿಲ್ಲ. ಹೀಗಾಗಿ ನಿಮ್ಮ ಸಮಸ್ಯೆ ಏನು? ನನ್ನನ್ನು ಏಕೆ ತಡೆದಿದ್ದೀರಿ ಎಂದು ಛತ್ತೀಸ್‌ಗಡದ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಪೊಲೀಸರನ್ನು ಪ್ರಶ್ನಿಸಿ ದ್ದಾರೆ.
ಉತ್ತರ ಪ್ರದೇಶದ ಲಖಿಂಪುರ ಜಿಲ್ಲೆಯಲ್ಲಿ ಎಂಟು ಮಂದಿ ಮೃತಪಟ್ಟ ಘಟನೆ ವಿರುದ್ಧ ವ್ಯಾಪಕ ಪ್ರತಿಭಟನೆಗಳ ನಡುವೆಯೇ ಬಘೇಲ್ ಅವರನ್ನು ರಾಜ್ಯ ಪೊಲೀಸರು ಮಂಗಳವಾರ ತಡೆದಿದ್ದಾರೆ.
ಭೂಪೇಶ್ ಬಘೇಲ್ ಅವರು ಪೊಲೀಸರ ಕ್ರಮ ವಿರೋಧಿಸಿ ಲಕ್ನೋ ವಿಮಾನ ನಿಲ್ದಾಣದ ಹೊರಗೆ ನೆಲದ ಮೇಲೆ ಕುಳಿತಿರುವ ಫೋಟೋವನ್ನು ಟ್ವೀಟ್ ಮಾಡಿದ್ದಾರೆ. ಸೀತಾಪುರದಲ್ಲಿ ಪೊಲೀಸ್ ವಶದಲ್ಲಿರುವ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಭೇಟಿಯಾಗಲು ನಾನು ಬಯಸಿದ್ದೆ ಎಂದು ಬಘೇಲ್ ಹೇಳಿದರು.
“ಯಾವುದೇ ಆದೇಶವಿಲ್ಲದೆ, ನನ್ನನ್ನು ಲಕ್ನೋ ವಿಮಾನ ನಿಲ್ದಾಣದ ಹೊರಗೆ ನಿಲ್ಲಿಸಲಾಗಿದೆ” ಎಂದು ಟ್ವೀಟ್ ನಲ್ಲಿ, 60 ವರ್ಷದ ಕಾಂಗ್ರೆಸ್ ನಾಯಕ ಹಿಂದಿಯಲ್ಲಿ ಬರೆದಿದ್ದಾರೆ.