ನವದೆಹಲಿ: ಇ- ಕಾಮರ್ಸ್ ದೈತ್ಯ ಕಂಪೆನಿ (E-commerce giant) ಫ್ಲಿಪ್‌ಕಾರ್ಟ್ (Flipkart) ತನ್ನ ‘ಬಿಗ್ ಬಿಲಿಯನ್ ಡೇಸ್ ಸೇಲ್’ (Big Billion Days Sale) ಸಾಮಾಜಿಕ ಜಾಲತಾಣದಲ್ಲಿ (social media) ಬಿಡುಗಡೆ ಮಾಡಿದ ಅನಿಮೇಟೆಡ್ ವಿಡಿಯೋ (viral video) ಜಾಹೀರಾತು ಎಲ್ಲರ ಆಕ್ರೋಶಕ್ಕೆ ಕಾರಣವಾದ ಬಳಿಕ ಕಂಪೆನಿ ಕ್ಷಮೆಯಾಚಿಸಿದೆ. ಈ ವಿಡಿಯೋದಲ್ಲಿ ಪುರುಷ ಸಮುದಾಯವನ್ನು ಸೋಮಾರಿಗಳು, ದರಿದ್ರದವರು, ಮೂರ್ಖರು ಎಂದು ಹೇಳಿರುವುದು ವಿರೋಧಕ್ಕೆ ಕಾರಣವಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋವನ್ನು ತೆಗೆದು ಹಾಕಲಾಗಿದೆ. ದಂಪತಿಯ ಕುರಿತಾದ ವಿಡಿಯೋ ಇದಾಗಿತ್ತು. ಫ್ಲಿಪ್‌ಕಾರ್ಟ್‌ನ ‘ಬಿಗ್ ಬಿಲಿಯನ್ ಡೇಸ್ ಸೇಲ್’ ಅನ್ನು ಪ್ರಚಾರ ಮಾಡುವ ಆನಿಮೇಟೆಡ್ ವಿಡಿಯೋದಲ್ಲಿ ಗಂಡನನ್ನು ಆಲಸಿ (ಸೋಮಾರಿ), ಕಂಬಕ್ತ್ (ದರಿದ್ರ) ಮತ್ತು ಬೇವಕೂಫ್ (ಮೂರ್ಖ) ಎಂದು ಹೇಳಲಾಗಿದೆ.
ಮಹಿಳೆಯರು ತನ್ನ ಗಂಡನ ಅರಿವಿಗೆ ಬಾರದಂತೆ ಫ್ಲಿಪ್‌ಕಾರ್ಟ್‌ನಿಂದ ಹ್ಯಾಂಡ್ ಬ್ಯಾಗ್ ಅನ್ನು ಖರೀದಿ ಮಾಡಿ ಅದನ್ನು ಮನೆಯಲ್ಲಿ ಗುಪ್ತವಾಗಿ ಸಂಗ್ರಹಿಸಬಹುದು ಎಂಬುದರ ಕುರಿತು ಈ ವಿಡಿಯೋದಲ್ಲಿ ತೋರಿಸಲಾಗಿದೆ.
ಎಕ್ಸ್ ನಲ್ಲಿ ಹಂಚಿಕೊಂಡಿರುವ ಈ ವಿಡಿಯೋ ಭಾರಿ ಆಕ್ರೋಶಕ್ಕೆ ಕಾರಣವಾಯಿತು. ಒತ್ತಾಯಕ್ಕೆ ಮಣಿದು ಫ್ಲಿಪ್‌ಕಾರ್ಟ್ ಕೊನೆಗೆ ಕ್ಷಮೆಯಾಚಿಸಿದೆ.
ಈ ವಿಡಿಯೋಗೆ ಅನೇಕರು ಕಾಮೆಂಟ್ ಮಾಡಿದ್ದು, ಇದರಲ್ಲಿ ಪತಿಯನ್ನು ಆಲಸಿ, ಅಲ್ಸಿ, ಕಂಬಕ್ತ್ ಮತ್ತು ಮತ್ತು ಬೇವಕೂಫ್ ಎಂದು ಸಂಬೋಧಿಸಿ ಮಾಡಿರುವ ವಿಡಿಯೋ ಪೋಸ್ಟ್ ನ ಹಿಂದಿನ ತರ್ಕವೇನು ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ಇದಕ್ಕಾಗಿ ಕ್ಷಮೆಯಾಚಿಸಬೇಕು ಮತ್ತು ಇದನ್ನು ಮತ್ತೆ ಪುನರಾವರ್ತಿಸುವುದಿಲ್ಲ ಎಂದು ಭಾವಿಸುತ್ತೇವೆ. ಈ ದುಷ್ಕೃತ್ಯವನ್ನು ಇನ್ನು ಮುಂದೆ ಸಹಿಸಲಾಗುವುದಿಲ್ಲ ಎಂದು ಹೇಳಿಕೊಂಡಿದ್ದಾರೆ.
ಬಳಿಕ ಫ್ಲಿಪ್‌ಕಾರ್ಟ್‌ನ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಿಂದ ಈ ವಿಡಿಯೋಗಳನ್ನು ತೆಗೆದು ಹಾಕಿ ಕ್ಷಮೆಯಾಚಿಸಿದೆ. ಭವಿಷ್ಯದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವುದಾಗಿ ಹೇಳಿದೆ.
We’re sorry for the offending video which was posted in error, and took it down as soon as we realised our mistake. We will do better in the future
— Flipkart (@Flipkart) September 23, 2024
ತಪ್ಪಾಗಿ ಪೋಸ್ಟ್ ಮಾಡಲಾದ ಆಕ್ಷೇಪಾರ್ಹ ಈ ವಿಡಿಯೋಗಾಗಿ ನಾವು ವಿಷಾದ ವ್ಯಕ್ತಪಡಿಸುತ್ತೇವೆ. ನಮ್ಮ ತಪ್ಪಿನ ಅರಿವಾದ ತಕ್ಷಣ ಅದನ್ನು ತೆಗೆದುಹಾಕಿದ್ದೇವೆ ಎಂದು ಅವರು ತಿಳಿಸಿದ್ದಾರೆ. ಬಳಕೆದಾರರೊಬ್ಬರು ಇದಕ್ಕೆ ಪ್ರತಿಕ್ರಿಯಿಸಿ ಇದನ್ನು ಪ್ರಕಟ ಮಾಡುವ ಮೊದಲು ಹೇಗೆ ಅನುಮೋದಿಸಿದ್ದೀರಿ, ಪ್ರಕಟ ಮಾಡಿದವರನ್ನು ವಜಾ ಮಾಡಲಾಗಿದೆಯೇ ಅಥವಾ ಇಲ್ಲವೇ? ಎಂದು ಪ್ರಶ್ನಿಸಿದ್ದಾರೆ.
How did you approve this in the first place? Did the publisher get fired or not? @Flipkart
— PS (@CryptoGawd_007) September 23, 2024
ಇನ್ನೊಬ್ಬರು ಫ್ಲಿಪ್‌ಕಾರ್ಟ್ ಅನ್ನು ಬಹಿಷ್ಕರಿಸುವುದಾಗಿ ಹೇಳಿದ್ದಾರೆ. ಇನ್ನೊಬ್ಬರು ಪ್ರತಿಕ್ರಿಯಿಸಿ, ಇದನ್ನು ಯೋಚಿಸಿರುವ ಕಾರ್ಯನಿರ್ವಾಹಕರನ್ನು ವಜಾಗೊಳಿಸಬೇಕು ಮತ್ತು ಅದು ಏಜೆನ್ಸಿಯಾಗಿದ್ದರೆ ಅವರೊಂದಿಗೆ ನಿಮ್ಮ ವ್ಯವಹಾರವನ್ನು ಆದಷ್ಟು ಬೇಗ ನಿಲ್ಲಿಸಿ. ನಿಮ್ಮಿಂದ ಸ್ಯಾಮ್‌ಸಂಗ್ ಫ್ರಿಜ್ ಮತ್ತು ಸೀಕೊ ವಾಚ್ ಅನ್ನು ಆರ್ಡರ್ ಮಾಡಲು ಹೊರಟಿದ್ದೆ. ಆದರೆ ಈಗ ಅದನ್ನು ಅಮೆಜಾನ್ ನಿಂದ ಖರೀದಿಸುವುದಾಗಿ ಹೇಳಿದ್ದಾರೆ.
ಫ್ಲಿಪ್‌ಕಾರ್ಟ್‌ನ ಬಿಗ್ ಬಿಲಿಯನ್ ಡೇಸ್ ಸೇಲ್ ಸೆಪ್ಟೆಂಬರ್ 27ರಂದು ಪ್ರಾರಂಭವಾಗಿದ್ದು, ಅಕ್ಟೋಬರ್ 6 ರವರೆಗೆ ನಡೆಯಲಿದೆ. ಈ ವರ್ಷದ ಮಾರಾಟವು ದೊಡ್ಡ ರಿಯಾಯಿತಿ ಸೇರಿದಂತೆ ಹಲವು ಕೊಡುಗೆಗಳನ್ನು ಪ್ರಕಟಿಸಿದೆ.
ಟಿವಿ, ವಾಷಿಂಗ್ ಮೆಷಿನ್, ರೆಫ್ರಿಜರೇಟರ್ ಮತ್ತು ಏರ್ ಕಂಡಿಷನರ್‌ಗಳಂತಹ ದೊಡ್ಡ ಉಪಕರಣಗಳ ಮೇಲೆ ಗಮನಾರ್ಹ ರಿಯಾಯಿತಿಗಳನ್ನು ಘೋಷಿಸಲಾಗಿದೆ. ಮೊಬೈಲ್ ಫೋನ್ ಗಳಲ್ಲಿ ಇತ್ತೀಚಿನ ವರ್ಷನ್ ಗಳ ಬಿಡುಗಡೆಗಳ ಮೇಲೆ ಭಾರಿ ರಿಯಾಯಿತಿಗಳೂ ಇವೆ. ಫ್ಯಾಷನ್, ವೈಯಕ್ತಿಕ ಆರೈಕೆ, ಪೀಠೋಪಕರಣ, ಅಲಂಕಾರ ಮತ್ತು ದಿನಸಿಗಳ ಮೇಲೂ ರಿಯಾಯಿತಿಗಳಿವೆ.