ಪಟನಾ: ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಪಾಟ್ನಾದಲ್ಲಿನ (Patna) ಹಿರಿಯ ಉದ್ಯಮಿಯೊಬ್ಬರನ್ನು ಗುಂಡಿಕ್ಕಿ ಕೊಂದ ಭಯಾನಕ ಘಟನೆಯೊಂದು ಇತ್ತೀಚೆಗೆ ನಡೆದಿದೆ. ಶಂಕಿತ(Suspects) ಆರು ಮಂದಿ ರಸ್ತೆಯುದ್ದಕ್ಕೂ ವ್ಯಕ್ತಿಯನ್ನು ಹಿಂಬಾಲಿಸಿಕೊಂಡು ಬಂದಿದ್ದು, ಮನೆಯೊಳಗೆ ಕಾಲಿಡುತ್ತಿದ್ದಂತೆ ಅವರ ಮೇಲೆ ಹಲವು ಸುತ್ತು ಗುಂಡು ಹಾರಿಸುತ್ತಿರುವುದನ್ನು ತೋರಿಸುವ ಸಿಸಿಟಿವಿ ದೃಶ್ಯಾವಳಿಗಳು ಈಗ ಹೊರಬಿದ್ದಿವೆ(Bihar Horror). ದಾನಪುರ ಪ್ರದೇಶದಲ್ಲಿ ಗುರುವಾರ(ನ.28) ಸಂಜೆ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.
60 ವರ್ಷದ ಪರಾಸ್ ರೈ ( Paras Rai) ಎಂಬುವವರು ಮನೆಗೆ ಹಿಂತಿರುಗುತ್ತಿದ್ದಾಗ ಎರಡು ದ್ವಿಚಕ್ರವಾಹನಗಳಲ್ಲಿ ಆರು ಮಂದಿ ಶಂಕಿತರು ಅವರನ್ನು ಹಿಂಬಾಲಿಸಿದ್ದಾರೆ. ಅವರು ʼನಯಾ ಟೋಲಾʼ ರಸ್ತೆಯನ್ನು ಸಮೀಪಿಸುತ್ತಿದ್ದಂತೆ, ಅವರಲ್ಲಿ ಮೂವರು ಕಾಲ್ನಡಿಗೆಯಲ್ಲಿ ಅವರನ್ನು ಹಿಂಬಾಲಿಸಲು ಪ್ರಾರಂಭಿಸಿದ್ದಾರೆ. ಯಾರಿಗೂ ಗೊತ್ತಾಗಬಾರದೆಂಬ ಕಾರಣಕ್ಕೆ ತಮ್ಮ ಕೈಯಲ್ಲಿದ್ದ ಶಸ್ತ್ರಾಸ್ತ್ರಗಳನ್ನು ಮರೆಮಾಚಿದ್ದು, ತಲೆಗೆ ಹೆಲ್ಮೆಟ್‌ಗಳನ್ನು ಹಾಕಿಕೊಂಡಿದ್ದಾರೆ.
ತನ್ನನ್ನು ಹಿಂಬಾಲಿಸುತ್ತಿರುವ ವ್ಯಕ್ತಿಗಳ ಬಗ್ಗೆ ಏನೂ ಅರಿಯದ ರಾಯ್ ತಮ್ಮಪಾಡಿಗೆ ಮನೆಯನ್ನು ತಲುಪಿದ್ದಾರೆ. ಅವರು ತಮ್ಮ ಮನೆಗೆ ಪ್ರವೇಶಿಸುತ್ತಿದ್ದಂತೆ, ಶಂಕಿತರಲ್ಲಿ ಒಬ್ಬ ಅವರ ಬೆನ್ನಿಗೆ ಗುಂಡು ಹಾರಿಸಿದ್ದಾನೆ. ಅವರು ಕೆಳಗೆ ಬೀಳುತ್ತಿದ್ದಂತೆ ಹಲವು ಗುಂಡುಗಳನ್ನು ಹಾರಿಸಿ ಎಲ್ಲರೂ ಪರಾರಿಯಾಗಿದ್ದಾರೆ.
Elderly Man Followed Into His House, Shot Dead. CCTV Footage Emerges
— NDTV (@ndtv) December 1, 2024
Read: https://t.co/vVZbojOFZT pic.twitter.com/CwDJKNARDB
ಗುಂಡಿನ ಸದ್ದು ಕೇಳಿ ಅಕ್ಕಪಕ್ಕದ ಮನೆಯವರು ಬೆಚ್ಚಿಬಿದ್ದು ಹೊರ ಬಂದಿದ್ದಾರೆ. ಗುಂಡಿನ ದಾಳಿಗೆ ಬಲಿಯಾಗಿದ್ದ ಪರಾಸ್ ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ಪಶ್ಚಿಮ) ಶರತ್ ಆರ್.ಎಸ್. ರೈ ತಿಳಿಸಿದ್ದಾರೆ. ಅವರ ಕಾಲುಗಳು ಮತ್ತು ಹಿಂಭಾಗಕ್ಕೆ ಐದು ಬಾರಿ ಗುಂಡು ಹಾರಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಪೊಲೀಸರು ಸ್ಥಳದಿಂದ ಐದು ಬುಲೆಟ್ ಶೆಲ್‌ಗಳನ್ನು ವಶಪಡಿಸಿಕೊಂಡಿದ್ದು, ವಿಧಿವಿಜ್ಞಾನ ತಜ್ಞರು ಬಂದು ಮಾದರಿಗಳನ್ನು ಸಂಗ್ರಹಿಸಿದ್ದಾರೆ. ಪರಾಸ್ ರೈ ಅವರ ಪೂರ್ವಜರ ಜಮೀನಿನ ಬಗ್ಗೆ ವಿವಾದವಿತ್ತು. ವಿವಾದವೇ ಅವರ ಕೊಲೆಗೆ ಕಾರಣವಾಗಿದ್ದರೆ ಆ ಕುರಿತು ತನಿಖೆ ಮಾಡಲಾಗುವುದು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೊಲೆಯ ಕುರಿತು ಸಹಾಯಕ ಪೊಲೀಸ್ ಅಧೀಕ್ಷಕ (ಎಎಸ್‌ಪಿ) ಭಾನು ಪ್ರತಾಪ್ ಸಿಂಗ್ ಮಾತನಾಡಿದ್ದಾರೆ. ಪರಾಸ್ ರೈ ಅವರ ಮಗ ದೂರು ನೀಡಿದ ನಂತರ ಪ್ರಕರಣವನ್ನು ದಾಖಲಿಸಲಾಗಿದೆ. ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಆಸ್ತಿ ವಿಚಾರಕ್ಕೆ ಮಗನಿಂದಲೇ ತಂದೆಯ ಭೀಕರ ಕೊಲೆ
ಕೆಲವು ತಿಂಗಳ ಹಿಂದೆಯಷ್ಟೇ ಆಸ್ತಿ ವಿಚಾರಕ್ಕಾಗಿ ತಂದೆಯನ್ನು ಕೊಂದ ಭೀಕರ ಘಟನೆ ತುಮಕೂರಿನಲ್ಲಿ ನಡೆದಿತ್ತು. ಕೊಲೆ ಮಾಡಿದ ಮಗ ಸಿದ್ದಪ್ಪ, ಪರಾರಿಯಾಗಿದ್ದ. ತುಮಕೂರಿನ ಕೊರಟಗೆರೆ ತಾಲೂಕಿನ ಆಲಪನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿತ್ತು. ತಂದೆ ಮಗನ ಜೊತೆ ಹಲವು ಬಾರಿ ಗಲಾಟೆ ನಡೆದಿತ್ತು. ಗ್ರಾಮದ ಹಿರಿಯರ ಸಮ್ಮುಖದಲ್ಲಿ ಹಲವು ಬಾರಿ ನ್ಯಾಯ ಪಂಚಾಯತಿ ಕೂಡಾ ಮಾಡಲಾಗಿತ್ತು. ಹಾಗಿದ್ದರೂ ಮಗನಿಗೆ ಆಸ್ತಿ ಕೊಡದ ಕಾರಣ ಈ ಕೊಲೆ ನಡೆದಿದೆ ಎನ್ನಲಾಗಿತ್ತು.
ವೆಂಕಟಪ್ಪನಿಗೆ ತುಮಕೂರಲ್ಲಿ ಒಟ್ಟು ಮೂರೂವರೆ ಎಕರೆ ಆಸ್ತಿ ಇತ್ತು. ಒಂದಷ್ಟು ದಿನಗಳ ಹಿಂದೆ ಜಮೀನು ಮಾರಾಟ ಮಾಡಿದ್ದ. ಮಾರಾಟ ಮಾಡಿ ಬಂದ ಜಮೀನಿನ 25 ಲಕ್ಷ ಹಣವನ್ನ ಮಗಳಿಗೆ ಕೊಟ್ಟಿದ್ದ. ಜಮೀನನ್ನು ಸಹ ಮಗಳ ಹೆಸರಿಗೆ ಬರೆದುಕೊಟ್ಟಿದ್ದ ಎನ್ನಲಾಗಿತ್ತು. ಇದೇ ವಿಚಾರಕ್ಕೆ ತಂದೆ ಮಗನ ಜೊತೆ ಹಲವು ಬಾರಿ ಗಲಾಟೆ ನಡೆದಿತ್ತು. ಗ್ರಾಮದ ಹಿರಿಯರ ಸಮ್ಮುಖದಲ್ಲಿ ಹಲವು ಬಾರಿ ನ್ಯಾಯ ಪಂಚಾಯತಿ ಕೂಡಾ ಮಾಡಲಾಗಿತ್ತು. ನ್ಯಾಯ ಪಂಚಾಯತಿ ಮಾಡಿದರೂ ಸಹ ಮಗನಿಗೆ ಆಸ್ತಿ, ಹಣ ನೀಡಲು ವೆಂಕಟಪ್ಪ ಹಿಂದೇಟು ಹಾಕಿದ್ದ ಎಂದು ತಿಳಿದು ಬಂದಿತ್ತು. ಕೊನೆಗೆ ಆಸ್ತಿ ವಿಚಾರಕ್ಕಾಗಿಯೇ ಮಗ ತಂದೆಯನ್ನು ಕೊಂದು ಪರಾರಿಯಾಗಿದ್ದ.
ಈ ಸುದ್ದಿಯನ್ನೂ ಓದಿ: Murder Case: ಕೊಲೆಯಾದ ಬಾಲಕಿಯ ಶವಕ್ಕೆ 18 ವರ್ಷಗಳ ಬಳಿಕ ಅಂತ್ಯಸಂಸ್ಕಾರ!