Thursday, 12th December 2024

ಚರಂಡಿಯಲ್ಲಿ ನೋಟುಗಳ ರಾಶಿ ಪತ್ತೆ

ಸಾರಂ: ಬಿಹಾರದ ಪಟ್ಟಣದ ಚರಂಡಿಯೊಂದರಲ್ಲಿ ನೋಟುಗಳ ರಾಶಿ ತೇಲುತ್ತಿರು ವುದು ಕಂಡು ಬಂದಿದ್ದು, ಚರಂಡಿ ಯೊಳಕ್ಕೆ ಇಳಿದು ಹಣ ಹುಡುಕುತ್ತಿರುವ ವಿಡಿಯೋ ಸೋಷಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ರಾಜಧಾನಿ ಪಾಟ್ನಾದಿಂದ ಸುಮಾರು 150 ಕಿಮೀ ದೂರದಲ್ಲಿರುವ ಸಸಾರಾಮ್‌ನಲ್ಲಿ ಈ ಘಟನೆ ನಡೆದಿದೆ.

100 ರೂ. ಮತ್ತು 10 ರೂ. ನೋಟುಗಳ ಬಂಡಲ್‌ ಚರಂಡಿಯೊಳಗೆ ಪತ್ತೆಯಾಗಿದ್ದು, ಜನಸಂದಣಿಯು ಚರಂಡಿ ಮೇಲಿನ ಸೇತುವೆಯ ಮೇಲೆ ಜಮಾಯಿಸಲು ಪ್ರಾರಂಭಿಸಿತು. ಈ ವೇಳೆ, ಕೆಲವರು ಚರಂಡಿಯೊಳಕ್ಕೆ ಇಳಿದು ಹಣ ಹುಡುಕಲು ಯತ್ನಿಸಿ ದ್ದಾರೆ. ಗುಂಪನ್ನು ಚದುರಿಸಲು ಪೊಲೀಸರು ಸ್ಥಳಕ್ಕಾಗಮಿಸಿದರು.

‘ಬೆಳಿಗ್ಗೆ ಚರಂಡಿಯಲ್ಲಿ ಭಾರಿ ಪ್ರಮಾಣದ ಹಣ ತೇಲುತ್ತಿರುವುದನ್ನು ನೋಡಿದ್ದೇವೆ, ಆದ್ದರಿಂದ, ನಾವು ಅದನ್ನು ನೋಡಲು ಇಲ್ಲಿ ನಿಂತೆವು. ಆದ್ರೆ, ಸ್ವಲ್ಪ ಸಮಯದ ನಂತರ ನಾವು ಹಿಂತಿರುಗಿದಾಗ ಯಾವುದೇ ನಗದು ತೇಲುತ್ತಿರಲಿಲ್ಲ’ ಎಂದು ವ್ಯಕ್ತಿಯೊಬ್ಬರು ಹೇಳಿದರು.