Friday, 22nd November 2024

ಚುನಾವಣಾ ಕಾನೂನುಗಳ ಮಸೂದೆಗೆ ಲೋಕಸಭೆಯಲ್ಲಿ ಸಿಕ್ಕಿತು ಅಂಗೀಕಾರ

ನವದೆಹಲಿ: ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಚುನಾವಣಾ ಕಾನೂನುಗಳ ಮಸೂದೆ 2021 ನ್ನು ಸೋಮವಾರ ಮಂಡಿಸಿತು. ಕಾಂಗ್ರೆಸ್ ಸಂಸದರ ವಿರೋಧದ ನಂತರ ಮಸೂದೆಯನ್ನು ಲೋಕಸಭೆಯಲ್ಲಿ ಅಂಗೀಕರಿಸಲಾಗಿದೆ.

ಜತೆಗೆ ಆಧಾರ್ ಕಾರ್ಡ್ ನೊಂದಿಗೆ ಮತದಾರರ ಪಟ್ಟಿಯನ್ನು ಲಿಂಕ್ ಮಾಡುವ ಅವಕಾಶವನ್ನು ಮಸೂದೆ ಮಾಡಿಕೊಡಲಿದೆ. ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಅವರು 1950ರ ಪ್ರಜಾಪ್ರತಿನಿಧಿ ಕಾಯ್ದೆ ಮತ್ತು 1951ರ ಪ್ರಜಾಪ್ರತಿನಿಧಿ ಕಾಯ್ದೆಗೆ ತಿದ್ದುಪಡಿಗಳನ್ನು ಮಂಡಿಸಿದರು.

ಸದನ ಮಧ್ಯಾಹ್ನ ಆರಂಭಗೊಂಡಾಗ, ತಿದ್ದುಪಡಿ ಮಸೂದೆಗೆ ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತ ಪಡಿಸಿದರು. ಲೋಕಸಭೆಯಲ್ಲಿ ಚುನಾವಣಾ ತಿದ್ದುಪಡಿ ಕಾಯ್ದೆಗೆ ಅಂಗೀಕಾರ ದೊರೆಯಿತು.

ಈ ತಿದ್ದುಪಡಿಯು ‘ಹೆಂಡತಿ’ ಎಂಬ ಪದವನ್ನು ‘ಸಂಗಾತಿ’ ಎಂಬ ಪದದಿಂದ ಬದಲಾಯಿಸುವ ಮೂಲಕ ಪ್ರಜಾಪ್ರತಿನಿಧಿ ಕಾಯ್ದೆಯಲ್ಲಿ ಲಿಂಗ-ತಟಸ್ಥ ಪದಗಳನ್ನು ಪರಿಚಯಿಸುವ ಗುರಿ ಹೊಂದಿದೆ.