ನವದೆಹಲಿ: ಕಾಂಗ್ರೆಸ್ ಸೇರಿರುವ ಕುಸ್ತಿಪಟುಗಳಾದ ವಿನೇಶ್ ಫೋಗಟ್ (Vinesh Phogat) ಮತ್ತು ಬಜರಂಗ್ ಪೂನಿಯಾ (Bajarang Punia) ಬಗ್ಗೆ ಯಾವುದೇ ವಿವಾದಾತ್ಮಕ ಹೇಳಿಕೆ ನೀಡದಂತೆ ಎಚ್ಚರಿಕೆ ವಹಿಸಬೇಕು ಎಂದು ಭಾರತೀಯ ಕುಸ್ತಿ ಫೆಡರೇಶನ್ (ಡಬ್ಲ್ಯುಎಫ್ಐ) ಮಾಜಿ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ (Brijbhushan Singh) ಅವರಿಗೆ ಬಿಜೆಪಿ ಹೇಳಿದೆ ಎಂಬುದಾಗಿ ಮೂಲಗಳು ತಿಳಿಸಿವೆ. ಮಾಜಿ ಬಿಜೆಪಿ ಸಂಸದ ವಿನೇಶ್ ಫೋಗಟ್ ಮತ್ತು ಸಾಕ್ಷಿ ಮಲಿಕ್ ಸೇರಿದಂತೆ ದೇಶದ ಕೆಲವು ಉನ್ನತ ಕ್ರೀಡಾಪಟುಗಳಿಂದ ಲೈಂಗಿಕ ಕಿರುಕುಳದ ಆರೋಪಗಳನ್ನು ಎದುರಿಸಿದ್ದರು. ಇದೀಗ ಅವರೆಲ್ಲರೂ ಕಾಂಗ್ರೆಸ್ ಬಾಗಿಲು ತಟ್ಟಿರುವ ಕಾರಣ ಬ್ರಿಜ್‌ಭೂಷಣ್ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಆದರೆ ಮೈಮರೆತು ಹೇಳಿಕೆ ನೀಡಿ ವಿವಾದ ಸೃಷ್ಟಿಸಿಕೊಳ್ಳಬಾರದು ಎಂಬುದಾಗಿ ಬಿಜೆಪಿ ಎಚ್ಚರಿಕೆ ನೀಡಿದೆ.
Must listen to Brijbhushan Singh 😶😶😶 Speaking on Today's incident 😂😂😂
— Sonu kumar (@Aryans8825) September 6, 2024
Finally the Dream came true for Vinesh phogat 🫡👍
We have been saying this from day one. Their sole aim is to enter politics.
BREAKING- Vinesh Phogat & Bajarang Punia will join the Congress today and… pic.twitter.com/9rwxUS6LSj
ಹರ್ಯಾಣದಲ್ಲಿ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಫೋಗಟ್ ಮತ್ತು ಕುಸ್ತಿಪಟು ಬಜರಂಗ್ ಪೂನಿಯಾ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದರು. ತಕ್ಷಣವೇ ಬ್ರಿಜ್‌ಭೂಷಣ್ ಅವರು ಮಾಡಿರುವ ಆರೋಪಿಗಳು ಕಾಂಗ್ರೆಸ್ ನಡೆಸಿರುವ ಪಿತೂರಿ ಎಂದು ಹೇಳಿಕೆ ನೀಡಿದ್ದರು.
ಪುನಿಯಾ, ಫೋಗಟ್ ಕಾಂಗ್ರೆಸ್ ಮುಖಗಳಾಗಿವೆ. ಅವರು ದಾಳಗಳು. ಅವರನ್ನು ಹರಿಯಾಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಹೂಡಾ, ಕಾಂಗ್ರೆಸ್ ಮತ್ತು ಕಾಂಗ್ರೆಸ್ ಕುಟುಂಬವು ದಾಳಗಳಂತೆ ಬಳಸಿಕೊಂಡಿದೆ ಎಂದು ಸಿಂಗ್ ಹೇಳಿದ್ದರ. ಇದೆಲ್ಲವೂ ಕುಸ್ತಿ ಫೆಡರೇಶನ್ ಆಫ್ ಇಂಡಿಯಾದ ಮೇಲೆ ಹಿಡಿತ ಸಾಧಿಸಲು ಮತ್ತು ಬಿಜೆಪಿ ಮತ್ತು ಅದರ ಸಿದ್ಧಾಂತದ ಮೇಲೆ ದಾಳಿ ಮಾಡಿರುವ ಪಿತೂರಿ. ರಾಹುಲ್ ಗಾಂಧಿ ಅವರ ಈ ತಂಡ, ಕಾಂಗ್ರೆಸ್ ಈ ಕೆಲಸಗಳನ್ನು ಮಾಡುತ್ತಲೇ ಇದೆ” ಎಂದು ಅವರು ಹೇಳಿದರು.
ಹೂಡಾ ಅವರೊಂದಿಗಿನ ಶೀತಲ ಸಮರದ ಬಳಿಕ ಬ್ರಿಜ್‌ಭೂಷಣ್ ಸಿಂಗ್ ಅವರು 2012 ರಲ್ಲಿ ಮೊದಲ ಬಾರಿಗೆ ಡಬ್ಲ್ಯುಎಫ್ಐನ ಅಧಿಕಾರ ಪಡೆದುಕೊಂಡಿದ್ದರು. ಸಿಂಗ್ ಅವರ ಇತ್ತೀಚಿನ ಹೇಳಿಕೆಯ ನಂತರ, ಕುಸ್ತಿಪಟುಗಳ ವಿರುದ್ಧ ಇನ್ನು ಮುಂದೆ ಯಾವುದೇ ಹೇಳಿಕೆಗಳನ್ನು ನೀಡದಂತೆ ಬಿಜೆಪಿ ಅವರಿಗೆ ಹೇಳಿದೆ ಎಂಬುದಾಗಿ ವರದಿಯಾಗಿದೆ.
ಅಭಿಮಾನಿಗಳಿಗೆ ಅವಮಾನ ಮಾಡದಂತೆ ಸೂಚನೆ
ಹರಿಯಾಣವು ಬೃಹತ್ ಸಂಖ್ಯೆಯ ಕ್ರೀಡಾಪಟುಗಳನ್ನು ರಾಷ್ಟ್ರೀಯ ತಂಡಗಳಿಗೆ ಕಳುಹಿಸುತ್ತದೆ. ರಾಜ್ಯದ ಕ್ರೀಡಾಪಟುಗಳು ದೊಡ್ಡ ನಿಷ್ಠಾವಂತ ಅಭಿಮಾನಿಗಳನ್ನು ಹೊಂದಿರುವುದು ಕಂಡುಬರುತ್ತದೆ. ಹೀಗಾಗಿ ಬಿಜೆಪಿ ತನ್ನ ಮಾಜಿ ಸಂಸದರಿಗೆ ಮೌನವಾಗಿರುವಂತೆ ಹೇಳಿದೆ.
ಹರಿಯಾಣದಲ್ಲಿ ಸಾಕಷ್ಟು ಬೆಂಬಲವನ್ನು ಪಡೆದಿದ್ದ ಕುಸ್ತಿಪಟುಗಳ ಪ್ರತಿಭಟನೆಗೆ ಸಂಬಂಧಿಸಿದ ಯಾವುದೇ ಹೊಸ ವಿವಾದ ಸೃಷ್ಟಿಸಲು ಬಿಜೆಪಿ ಬಯಸುತ್ತಿಲ್ಲ ಎಂಬುದಾಗಿ ಮೂಲಗಳು ತಿಳಿಸಿವೆ. ಮಹಿಳಾ ಕುಸ್ತಿಪಟುಗಳು ಮಾಡಿದ ಆರೋಪಗಳ ನಂತರ, ಬಿಜೆಪಿ ಸಿಂಗ್ ಅವರಿಗೆ ಕೈಸರ್‌ಗಂಜ್‌ನಿಂದ ಟಿಕೆಟ್ ನೀಡಲಿಲ್ಲ. ಈ ವರ್ಷದ ಆರಂಭದಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಅವರ ಮಗ ಕರಣ್ ಭೂಷಣ್ ಸಿಂಗ್ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಿ ಗೆಲ್ಲಿಸಿತ್ತು.
ಈ ಸುದ್ದಿಯನ್ನೂ ಓದಿ: ಐಸಿಸಿ ಟಿ20 ಬ್ಯಾಟಿಂಗ್ ರ‍್ಯಾಂಕಿಂಗ್: ಸೂರ್ಯಕುಮಾರ್, ಬಾಬರ್ ಸ್ಥಾನ ಫಿಕ್ಸ್
ಕರಣ್ ಭೂಷಣ್ ಸಿಂಗ್ ಅವರು ಸಮಾಜವಾದಿ ಪಕ್ಷದ ಭಗತ್ ರಾಮ್ ಅವರನ್ನು 1.48 ಲಕ್ಷ ಮತಗಳ ಅಂತರದಿಂದ ಸೋಲಿಸಿದ್ದಾರೆ. , ಫೋಗಟ್ ಮತ್ತು ಪುನಿಯಾ ಇಬ್ಬರೂ ಸಿಂಗ್ ವಿರುದ್ಧದ ಹೋರಾಟವನ್ನು ಮುಂದುವರಿಸುವುದಾಗಿ ಹೇಳಿದ್ದಾರೆ.
ಎರಡು ಬಾರಿ ವಿಶ್ವ ಚಾಂಪಿಯನ್ಶಿಪ್ ಪದಕ ವಿಜೇತೆ ಹಾಗೂ ಏಷ್ಯಾಡ್ ಚಿನ್ನದ ಪದಕ ವಿಜೇತರಾಗಿರುವ 30ರ ಹರೆಯದ ಸೈನಾ ಜುಲಾನಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಪುನಿಯಾ ಅವರನ್ನು ಅಖಿಲ ಭಾರತ ಕಿಸಾನ್ ಕಾಂಗ್ರೆಸ್ ನ ಕಾರ್ಯಕಾರಿ ಅಧ್ಯಕ್ಷರನ್ನಾಗಿ ಮಾಡಲಾಗಿದೆ.