Sunday, 15th December 2024

ತೆಲಂಗಾಣ ಬ್ರೇಕಿಂಗ್‌: ಬಿಜೆಪಿ ನಾಯಕನ ಜೀವಂತ ದಹನ, ದುಷ್ಕರ್ಮಿಗಳ ಕೃತ್ಯ

ತೆಲಂಗಾಣ : ಕಾರಿನ ಡಿಕ್ಕಿಯಲ್ಲಿ ಬಿಜೆಪಿ ನಾಯಕನನ್ನು ಲಾಕ್ ಮಾಡಿ ದುಷ್ಕರ್ಮಿಗಳು ಜೀವಂತವಾಗಿ ಸುಟ್ಟುಹಾಕಿರುವ ಘಟನೆ ತೆಲಂಗಾಣದ ಮೇದಕ್ ಜಿಲ್ಲೆಯಲ್ಲಿ ನಡೆದಿದೆ.

ಬಿಜೆಪಿ ನಾಯಕನನ್ನು ಡಿಕ್ಕಿಯಲ್ಲಿ ಹಾಕಿ ದುಷ್ಕರ್ಮಿಗಳು ಬೆಂಕಿ ಹಚ್ಚಿ ಹತ್ಯೆ ಮಾಡಿದ್ದಾರೆ. ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ. ಘಟನೆ ಸಂಬಂಧ ಮಾಹಿತಿ ನೀಡಿರುವ ಪೊಲೀಸ್ ವರಿಷ್ಠಾಧಿಕಾರಿ ಚಂದನಾ ದೀಪ್ತಿ, ಅಪರಿಚಿತ ವ್ಯಕ್ತಿಗಳು ಬಿಜೆಪಿ ನಾಯಕನನ್ನು ಕಾರಿನಲ್ಲಿ ಲಾಕ್ ಮಾಡಿ ಕಾರಿಗೆ ಬೆಂಕಿ ಹಚ್ಚಿದ್ದಾರೆ.

ಡಿಕ್ಕಿಯಲ್ಲಿ ಬಿಜೆಪಿ ನಾಯಕನ ಸುಟ್ಟ ಮೃತದೇಹ ಪತ್ತೆಯಾಗಿದೆ. ಪ್ರಕರಣ ಸಂಬಂಧ ತನಿಖೆ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.