Sunday, 15th December 2024

ಬಿಜೆಪಿ ನಾಯಕ ಚೆಂದುಪಾಟ್ಲ ಜಂಗಾ ರೆಡ್ಡಿ ನಿಧನ

ಹೈದರಾಬಾದ್: ಬಿಜೆಪಿಯ ಹಿರಿಯ ನಾಯಕ ಚೆಂದುಪಾಟ್ಲ ಜಂಗಾ ರೆಡ್ಡಿ (87) ಶನಿವಾರ ಆಸ್ಪತ್ರೆ ಯಲ್ಲಿ ನಿಧನರಾದರು.

ಶ್ವಾಸಕೋಶಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಬಳಲುತ್ತಿದ್ದರು ಎಂದು ಪಕ್ಷದ ಮೂಲಗಳು ತಿಳಿಸಿವೆ. ಜಂಗಾ ರೆಡ್ಡಿ ಅವರು 1984ರಲ್ಲಿ ಅಂದಿನ ಅವಿಭಜಿತ ಆಂಧ್ರಪ್ರದೇಶದ ತೆಲಂಗಾಣ ಪ್ರದೇಶದ ಹನುಮಕೊಂಡ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್‌ನ ಹಿರಿಯ ನಾಯಕ ಪಿ.ವಿ.ನರಸಿಂಹ ರಾವ್ ಅವರನ್ನು ಸೋಲಿಸಿದ್ದರು.

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಮರಣದ ನಂತರ 1984ರಲ್ಲಿ ಲೋಕಸಭೆಗೆ ಬಿಜೆಪಿಯಿಂದ ಚುನಾಯಿತರಾದ ಇಬ್ಬರು ಸಂಸದರ ಪೈಕಿ ಜಂಗಾ ರೆಡ್ಡಿ ಒಬ್ಬರಾಗಿದ್ದರು.

ಅವಿಭಜಿತ ಆಂಧ್ರಪ್ರದೇಶದ ವಿಧಾನಸಭೆಗೆ ಜಂಗಾರೆಡ್ಡಿ ಅವರು ಮೂರು ಬಾರಿ ಶಾಸಕರಾಗಿ ಆಯ್ಕೆ ಯಾಗಿದ್ದರು. ವಿದ್ಯಾರ್ಥಿ ದಿನಗಳಿಂದಲೂ ಸಾರ್ವಜನಿಕ ಜೀವನದಲ್ಲಿ ಸಕ್ರಿಯರಾಗಿದ್ದ ಅವರು ರಾಮ ಜನ್ಮಭೂಮಿ ಚಳವಳಿ ಸೇರಿದಂತೆ ಅನೇಕ ಆಂದೋಲನಗಳಲ್ಲಿ ಭಾಗವಹಿಸಿದ್ದರು.