ನವದೆಹಲಿ: ಕೇಂದ್ರ ಸರ್ಕಾರವು ನೂತನ ಮೂರು ಕೃಷಿ ಕಾನೂನುಗಳನ್ನು ಬಿಜೆಪಿಯ ಕೋಟ್ಯಧಿಪತಿ ಸ್ನೇಹಿತರಿಗೆ ಅನುಕೂಲವಾಗುವಂತೆ ರೂಪಿಸಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಶನಿವಾರ ಆರೋಪಿಸಿದ್ದಾರೆ.
ಹಿಮಾಚಲ ಪ್ರದೇಶದಲ್ಲಿ ಅದಾನಿ, ಪ್ರತಿ ಕೆ.ಜಿ ಸೇಬು ದರವನ್ನು ₹16 ಕಡಿಮೆ ಮಾಡಿರುವ ವರದಿ ಉಲ್ಲೇಖಿಸಿ ಪ್ರತಿಕ್ರಿಯಿಸಿರುವ ಪ್ರಿಯಾಂಕಾ, ರೈತರ ಉತ್ಪನ್ನ ಗಳನ್ನು ನಿರ್ಧರಿಸುವ ಹಕ್ಕನ್ನು ಆಡಳಿತ ಪಕ್ಷದ ಕೋಟ್ಯಧಿಪತಿ ಸ್ನೇಹಿತರಿಗೆ ನೀಡಿದರೆ ಹೀಗೆ ಸಂಭವಿಸುತ್ತದೆ. ಇದರಿಂದಾಗಿ, ಮಾರುಕಟ್ಟೆಯಲ್ಲಿ ರೈತರ ಸಂಕಷ್ಟಕ್ಕೆ ಕಾರಣವಾಗಿದೆ’ ಎಂದು ಹೇಳಿದ್ದಾರೆ.
ಮೂರು ‘ಕಪ್ಪು’ ಕೃಷಿ ಕಾನೂನುಗಳನ್ನು ರೈತರು ಏಕೆ ವಿರೋಧಿಸುತ್ತಿದ್ದಾರೆ? ರೈತರ ಶ್ರಮದಿಂದ ಬೆಳೆದ ಬೆಳೆಗಳಿಗೆ ಬೆಲೆ ಮತ್ತು ಇತರ ವಸ್ತು ಗಳನ್ನು ನಿರ್ಧರಿ ಸುವ ಹಕ್ಕನ್ನು ಬಿಜೆಪಿಯ ಕೋಟ್ಯಧಿಪತಿ ಗೆಳೆಯರಿಗೆ ನೀಡಿದರೆ ಇದು ಸಂಭವಿಸುತ್ತದೆ ಎಂದು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ. ಕೃಷಿ ಕಾಯ್ದೆ ರೂಪಿಸಿರುವುದು ಬಿಜೆಪಿಯ ಕೋಟ್ಯಧಿಪತಿ ಸ್ನೇಹಿತರ ಲಾಭಕ್ಕಾಗಿ ಎಂದವರು ಆರೋಪಿಸಿದರು.