Thursday, 7th December 2023

ನಾಳೆ ಬಿಜೆಪಿ ಸಂಸದೀಯ ಪಕ್ಷದ ಸಭೆ

ನವದೆಹಲಿ : ಉತ್ತರ ಪ್ರದೇಶ, ಉತ್ತರಾಖಂಡ, ಗೋವಾ ಮತ್ತು ಮಣಿಪುರದಲ್ಲಿ ಬಿಜೆಪಿ ಅಧಿಕಾರಕ್ಕೆ ಮರಳುವಿಕೆಯಿಂದ ಪಕ್ಷದ ಕಾರ್ಯಕರ್ತರು ಉತ್ತೇಜಿತರಾಗಿದ್ದಾರೆ. ಮಾರ್ಚ್ 15ರಂದು ಬಿಜೆಪಿ ಸಂಸದೀಯ ಪಕ್ಷದ ಸಭೆ ನಡೆಯಲಿದ್ದು, ಲೋಕಸಭಾ ಮತ್ತು ರಾಜ್ಯಸಭಾ ಸಂಸದರನ್ನ ಹಾಜರಿರಲು ಕೇಳಲಾಗಿದೆ.

ನಾಲ್ಕು ರಾಜ್ಯಗಳ ಗೆಲುವಿನ ಬಳಿಕ ಇದು ಬಿಜೆಪಿಯ ಮೊದಲ ಸಭೆಯಾಗಿದೆ.

ಬಿಜೆಪಿ ಸಂಸದೀಯ ಪಕ್ಷದ ಕೊನೆಯ ಸಭೆ ಡಿಸೆಂಬರ್ 21ರಂದು ನಡೆಯಿತು. ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗ ವಹಿಸಿದ್ದರು. ಸಂಸತ್ತಿನಲ್ಲಿ ಸಂಸದರ ಅನುಪಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು ಮತ್ತು ತಮ್ಮನ್ನು ತಾವು ಬದಲಾಯಿಸ ಬೇಕು, ಇಲ್ಲದಿದ್ದರೆ ಮುಂದಿನ ಕ್ರಮ ತೆಗೆದುಕೊಳ್ಳಬಹುದು ಎಂದು ಎಚ್ಚರಿಸಿದ್ದರು.

error: Content is protected !!