Thursday, 12th December 2024

ಸಂಸದ ಮನೋಜ್ ತಿವಾರಿಗೆ ಹೆಣ್ಣು ಮಗು

ನವದೆಹಲಿ: ನಟ ಹಾಗೂ ಬಿಜೆಪಿ ಸಂಸದರಾಗಿರುವ ಮನೋಜ್ ತಿವಾರಿ ಹೆಣ್ಣುಮಗುವಿಗೆ ತಂದೆಯಾಗಿದ್ದಾರೆ. ಈ ಕುರಿತು ಟ್ವಿಟರ್​ನಲ್ಲಿ ಮಗುವಿನ ಜತೆ ಸಂತಸ ಹಂಚಿಕೊಂಡಿದ್ದಾರೆ.

ನನ್ನ ಮನೆಗೆ ಹೊಸ ದೇವತೆ ಆಗಮಿಸಿದ್ದಾಳೆ, ನನಗೆ ಹೆಣ್ಣುಮಗುವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ. ಮೊದಲ ಪತ್ನಿಯಿಂದ ವಿಚ್ಛೇದನ ಪಡೆದಿರುವ ಮನೋಜ್ ತಿವಾರಿ ಅವರಿಗೆ ಇದು ಎರಡನೆಯ ವಿವಾಹ. ಈಗಾಗಲೇ ವಿಚ್ಛೇದಿತ ಪತ್ನಿಯಿಂದ ಇವರಿಗೆ ಹೆಣ್ಣುಮಗುವಿದೆ. ಇದು ಇವರ ಎರಡನೆಯ ಮಗು.

ಮನೋಜ್​ ತಿವಾರಿ ಬಿಜೆಪಿ ಸಂಸದ ಹಾಗೂ ನಟರೂ ಹೌದು. ದೇವ್ರಾ ಭೈಲ್ ದೀವಾನಾ ಎಂಬ ಭೋಜ್‌ಪುರಿ ಚಿತ್ರದಲ್ಲಿ ಕಾಣಿಸಿ ಕೊಂಡಿದ್ದರು. ಚಿತ್ರ 2014ರಲ್ಲಿ ತೆರೆ ಕಂಡಿತ್ತು. 2010ರಲ್ಲಿ ನಡೆದ ಬಿಗ್‌ಬಾಸ್ ಸೀಸನ್ 4ನಲ್ಲಿ ಭಾಗವಹಿಸಿದ್ದರು.