Thursday, 12th December 2024

ಮಣಿಪುರದ ಸಿಂಗಾಟ್’ನಲ್ಲಿ ಮೊದಲ ಗೆಲುವಿನ ಖಾತೆ ತೆರೆದ ಬಿಜೆಪಿ

ನವದೆಹಲಿ: ಉಪ ಚುನಾವಣೆ 2020ರಲ್ಲಿ ಮಣಿಪುರದ ಸಿಂಗಾಟ್‌ ನಲ್ಲಿ ಭಾರತೀಯ ಜನತಾ ಪಾರ್ಟಿ ಮೊದಲ ಗೆಲುವಿನ ಖಾತೆ ತೆರೆದಿದೆ.

ಉಪ ಚುನಾವಣೆಯಲ್ಲಿ ಮಣಿಪುರದ ಸಿಂಗಾಟ್‌ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿಗೆ ಮೊದಲ ಜಯ ಲಭ್ಯ ವಾಗಿರುವುದಾಗಿ ಚುನಾವಣಾ ಆಯೋಗ ಘೋಷಿಸಿದೆ. ಮಣಿಪುರದ ಐದು ಉಪ ಚುನಾವಣಾ ಕ್ಷೇತ್ರಗಳ ಪೈಕಿ ಸಿಂಗಾಟ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಜಿನ್ಸುವಾನ್ಹೌ ಜಯಗಳಿಸಿದ್ದಾರೆ.

ವಾಂಗೋಯಿ ಕ್ಷೇತ್ರದಲ್ಲಿ ಓನಮ್ ಲುಖೋಯ್ ಸಿಂಗ್ ಅವರು 268 ಮತಗಳ ಅಂತರದಿಂದ ನ್ಯಾಶನಲ್ ಪೀಪಲ್ಸ್ ಪಾರ್ಟಿ (ಎನ್‌ಪಿಪಿ) ಅಭ್ಯರ್ಥಿ ಖುರೈಜಮ್ ಲೋಕನ್ ಸಿಂಗ್ ವಿರುದ್ಧ ಜಯಗಳಿಸಿದ್ದಾರೆ ಎಂದು ತಿಳಿದುಬಂದಿದೆ.

ಕಾಂಗ್ರೆಸ್‌ನ ಮೊಯಿರಾಂಗ್ಥೆಮ್ ಹೇಮಂತ ಸಿಂಗ್ ಅವರು ವಾಂಗ್‌ಜಿಂಗ್ ಟೆಂಥಾ ಕ್ಷೇತ್ರದಲ್ಲಿ ಬಿಜೆಪಿಯ ಪಾವೊಮ್ ಬ್ರೋಜೆನ್ ಸಿಂಗ್ ವಿರುದ್ಧ 675 ಮತಗಳ ಅಂತರದ ಮುನ್ನಡೆ ಕಾಯ್ದುಕೊಂಡಿದ್ದಾರೆ. ನ.7 ರಂದು ರಾಜ್ಯದ ಲಿಲಾಂಗ್, ವಾಂಗ್‌ಜಿಂಗ್ ಟೆಂಥಾ ಮತ್ತು ಸೈತು ಸೇರಿದಂತೆ ಐದು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆದಿತ್ತು.