Thursday, 12th December 2024

ಪಂಜಾಬ್: ಚುನಾವಣೆ ಮುಂದೂಡುವಂತೆ ಬಿಜೆಪಿ ಮನವಿ

ಪಂಜಾಬ್ : ಪಂಜಾಬ್ ನಲ್ಲಿ ಚುನಾವಣೆ ಮುಂದೂಡುವಂತೆ ಕೇಂದ್ರ ‘ ಚುನಾವಣಾ ಆಯೋಗ’ ಕ್ಕೆ ಪಂಜಾಬ್ ಬಿಜೆಪಿಯು ಕೂಡ ಕೇಂದ್ರ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದೆ. ಈ ಮೊದಲು ಸಿಎಂ ಚರಣ್ ಜಿತ್ ಸಿಂಗ್ ಪತ್ರ ಬರೆದಿದ್ದರು.

ಫೆ. 16 ರಂದು ಗುರು ರವಿದಾಸ್ ಜಯಂತಿ ಹಿನ್ನೆಲೆಯಲ್ಲಿ ವಿಧಾನಸಭಾ ಚುನಾವಣೆ ಮುಂದೂಡುವಂತೆ ಬಿಜೆಪಿ ಪತ್ರ ಬರೆದಿದೆ. ಉತ್ತರ ಪ್ರದೇಶ, ಪಂಜಾಬ್, ಗೋವಾ, ಮಣಿಪುರ ಮತ್ತು ಉತ್ತರಾಖಂಡದ ವಿಧಾನಸಭಾ ಚುನಾವಣೆಯನ್ನು 7 ಹಂತಗಳಲ್ಲಿ ನಡೆಸುವುದಾಗಿ ಚುನಾವಣಾ ಆಯೋಗ ಘೋಷಿಸಿತ್ತು.

ಫೆಬ್ರವರಿ 14 ರಂದು ಎಲೆಕ್ಷನ್ ನಡೆಸುವುದಾಗಿ ತಿಳಿಸಿತ್ತು. ಇದೀಗ ಗುರು ರವಿದಾಸ ಜಯಂತಿ ಹಿನ್ನೆಲೆ ಅನೇಕರು ವಾರಣಾಸಿಗೆ ತೆರಳುತ್ತಾರೆ. ಆದ್ದರಿಂದ ಚುನಾವಣೆಯನ್ನು ಮುಂದೂಡುವಂತೆ ಕೇಂದ್ರ ಚುನಾವಣಾ ಆಯೋಗಕ್ಕೆ ಬಿಜೆಪಿ ಪತ್ರ ಬರೆದಿದೆ.