Sunday, 15th December 2024

ಗುಜರಾತ್‌ ಚುನಾವಣೆ: ಬಿಜೆಪಿಯಿಂದ ನೂರು ಹೊಸ ಅಭ್ಯರ್ಥಿ ಕಣಕ್ಕೆ

ಗಾಂಧೀನಗರ: ನಡೆಯಲಿರುವ ಗುಜರಾತ್‌ ವಿಧಾನಸಭಾ ಚುನಾವಣೆ(2022) ಯಲ್ಲಿ ಬಿಜೆಪಿ ಕನಿಷ್ಠ ನೂರು ಹೊಸ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ ಎಂದು ರಾಜ್ಯ ಘಟಕದ ಅಧ್ಯಕ್ಷ ಸಿ.ಆರ್.ಪಾಟೀಲ್ ಹೇಳಿದ್ದಾರೆ.

ಮಂಗಳವಾರ ‘ಪೇಜ್‌ ಪ್ರಮುಖ್‌’ ಕಾರ್ಡ್‌ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿ, ರಾಜ್ಯ ಬಿಜೆಪಿ ಮುಖ್ಯಸ್ಥರು, ‘ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಹಳೆ ಅಭ್ಯರ್ಥಿಗಳನ್ನು ಬದಲಿಸಿ ಕನಿಷ್ಠ ನೂರು ಹೊಸ ಮುಖಗಳಿಗೆ ಅವಕಾಶ ನೀಡಲಾಗುತ್ತದೆ. ಇಲ್ಲಿ ಹಾಜರಿರುವ ಹಾಲಿ ಶಾಸಕರು ಈ ಮಾತನ್ನು ವೈಯಕ್ತಿಕವಾಗಿ ತೆಗೆದುಕೊಳ್ಳುವ ಅಗತ್ಯವಿಲ್ಲ ಎಂದು ಹೇಳಿದರು.

‘ಚುನಾವಣೆಗೆ ಟಿಕೆಟ್‌ ಬೇಕು ಎಂದು ಯಾರು ನನ್ನ ಬಳಿಗೆ ಬರಬೇಡಿ. ನಿರ್ಧಾರ ಕೈಗೊಳ್ಳುವವರು ಹೈಕಮಾಂಡ್‌ ನಾಯಕರು ಎಂದು ತಿಳಿಸಿದರು.