Sunday, 15th December 2024

ರಾಷ್ಟ್ರವನ್ನು ಒಗ್ಗೂಡಿಸುವ ಉದ್ದೇಶಕ್ಕಾಗಿ ನಡೆದ ಯಾತ್ರೆಯನ್ನು ಮೆಚ್ಚಲೇಬೇಕು

ಖನೌ: ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಗೆ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ತಮ್ಮ ಬೆಂಬಲ ವ್ಯಕ್ತಪಡಿಸಿದರು.

ಈ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಚಂಪತ್ ರೈ, ರಾಷ್ಟ್ರವನ್ನು ಒಗ್ಗೂ ಡಿಸುವ ಉತ್ತಮ ಉದ್ದೇಶಕ್ಕಾಗಿ ನಡೆದ ಯಾತ್ರೆಯನ್ನು ಮೆಚ್ಚಲೇಬೇಕು.

‘ನಾನು ಆರ್‌ಎಸ್‌ಎಸ್‌ನೊಂದಿಗೆ ಸಂಬಂಧ ಹೊಂದಿದ್ದೇನೆ. ಯಾತ್ರೆಯನ್ನು ಸಂಘ ಪರಿವಾರ ಎಂದೂ ಖಂಡಿಸಿಲ್ಲ. ಅದರಲ್ಲಿ ತಪ್ಪೇನಿಲ್ಲ. ಅದನ್ನು ಯಾರೂ ವಿರೋಧಿಸಲು ಸಾಧ್ಯವಿಲ್ಲ’ ಎಂದು ಹೇಳಿದ್ದಾರೆ.

ರಾಹುಲ್ ದೇಶಕ್ಕಾಗಿ ನಡೆಯುವ ಯುವಕ ಎಂದು ಕರೆದಿರುವ ರೈ, ದೇವಸ್ಥಾನದ ಟ್ರಸ್ಟ್‌ನ ಖಜಾಂಚಿ ಗೋವಿಂದ್ ದೇವ್ ಗಿರಿ ಅವರು ರಾಹುಲ್ ಪ್ರಯತ್ನವನ್ನು ಶ್ಲಾಘಿಸಿದರು.

ಯಾತ್ರೆಯ ಭಾಗವಾಗುವಂತೆ ಅಯೋಧ್ಯೆಯ ಆಚಾರ್ಯ ಸತ್ಯೇಂದ್ರ ದಾಸ್ ಸೇರಿದಂತೆ ಅನೇಕ ಸಂತರು ಮತ್ತು ದಾರ್ಶನಿಕರಿಗೆ ಕಾಂಗ್ರೆಸ್ ಆಹ್ವಾನ ಕಳುಹಿಸಿದೆ. ಆದರೆ, ರಾಮ ಮಂದಿರದ ಪ್ರಧಾನ ಅರ್ಚಕರು ಯಾತ್ರೆಗೆ ಬರಲು ನಿರಾಕರಿಸಿದ್ದಾರೆ.

ಮಾಜಿ ಕೇಂದ್ರ ಸಚಿವ ಜೈರಾಮ್ ರಮೇಶ್, ಸಲ್ಮಾನ್ ಖುರ್ಷಿದ್, ಯುಪಿ ಕಾಂಗ್ರೆಸ್ ಮುಖ್ಯಸ್ಥ ಬ್ರಿಜ್ಲಾಲ್ ಖಬ್ರಿ, ಮಾಜಿ ರಾಜ್ಯ ಮುಖ್ಯಸ್ಥ ಅಜಯ್ ಕುಮಾರ್ ಲಲ್ಲು ಮತ್ತು ರಾಷ್ಟ್ರೀಯ ಲೋಕದಳದ ಕೆಲವು ನಾಯಕರು ಸೇರಿದಂತೆ ಹಿರಿಯ ಕಾಂಗ್ರೆಸ್ ನಾಯಕರು ಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ.

ರಾಹುಲ್‌ ಗಾಂಧಿ ಅವರ ಭಾರತ್‌ ಜೋಡೋ ಯಾತ್ರೆಯು ಗಮನ ಸೆಳೆಯುತ್ತಿದೆ.