ನವದೆಹಲಿ: ಗುಜರಾತ್ ವಿಧಾನಸಭಾ ಚುನಾವಣೆಯ ಮೇಲುಸ್ತುವಾರಿ ನೋಡಿಕೊಳ್ಳಲು ವೀಕ್ಷಕರನ್ನು ಕಾಂಗ್ರೆಸ್ ಸೋಮವಾರ ನೇಮಕ ಮಾಡಿದೆ.
ಐದು ವಲಯ ವೀಕ್ಷಕರನ್ನು ನೇಮಕ ಮಾಡಿರುವ ಕಾಂಗ್ರೆಸ್, 32 ಲೋಕಸಭಾ ಕ್ಷೇತ್ರಗಳಲ್ಲಿ ತಲಾ 32 ವೀಕ್ಷಕರು ಮತ್ತು ಐವರು ಇತರ ವೀಕ್ಷಕರನ್ನು ನೇಮಿಸಿದೆ. ಕರ್ನಾಟಕದ ಬಿ.ಕೆ.ಹರಿಪ್ರಸಾದ್ ಮತ್ತು ಕೆ.ಹೆಚ್.ಮುನ್ನಿಯಪ್ಪ ಕೂಡಾ ವಲಯ ವೀಕ್ಷಕರನ್ನಾಗಿ ನೇಮಕ ಮಾಡಲಾಗಿದೆ.
ಬಿ.ಕೆ.ಹರಿಪ್ರಸಾದ್ ಉತ್ತರ ವಲಯದ ವೀಕ್ಷಕರಾಗಿದ್ದಾರೆ. ಇದರ ಕೇಂದ್ರ ಕಚೇರಿ ಅಹಮದಾಬಾದ್ ನಲ್ಲಿದೆ. ಹೆ.ಹೆಚ್ ಮುನಿಯಪ್ಪ ಐದನೇ ವಲಯ ವೀಕ್ಷಕರಾಗಿದ್ದಾರೆ.
182 ಸದಸ್ಯ ಬಲದ ಗುಜರಾತ್ ವಿಧಾನಸಭೆಗೆ ಡಿಸೆಂಬರ್ 1 ಮತ್ತು 5 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಡಿಸೆಂಬರ್ 8 ರಂದು ಮತಗಳ ಎಣಿಕೆ ಕಾರ್ಯ ನಡೆದು ಅಂದೇ ಫಲಿತಾಂಶ ಪ್ರಕಟವಾಗಲಿದೆ.