Thursday, 12th December 2024

9 ಅಂಧ ವಿದ್ಯಾರ್ಥಿಗಳು ಬೋರ್ಡ್ ಪರೀಕ್ಷೆಯಲ್ಲಿ ಉತ್ತೀರ್ಣ

ಬೆರ್ಹಂಪುರ್: ಒಡಿಶಾದ ಗಂಜಾನ್ ಜಿಲ್ಲೆಯಲ್ಲಿ ಅಂಧ ವಿದ್ಯಾರ್ಥಿಗಳಿಗಾಗಿರುವ ಶಾಲೆಯ 9 ವಿದ್ಯಾರ್ಥಿಗಳು 10ನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.

ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್(ಬಿಎಸ್‌ಇ) ನಡೆಸಿದ 10ನೇ ತರಗತಿ ಪರೀಕ್ಷೆಯಲ್ಲಿ ಐವರು ಬಾಲಕಿಯರು ಸೇರಿ 9 ಮಂದಿ ಅಂಧ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ಅಂಬಾಪುವಾದಲ್ಲಿ ಅಂಧ ವಿದ್ಯಾರ್ಥಿಗಳ ರೆಡ್ ಕ್ರಾಸ್ ಶಾಲೆಯ ಪ್ರಾಂಶುಪಾಲರಾದ ಪ್ರಿಯ ರಂಜನ್ ಮಹಾಕುಡಾ ಹೇಳಿದ್ದಾರೆ.

ಒಬ್ಬ ಬಾಲಕಿ 600ಕ್ಕೆ 360 ಅಂಕ ಗಳಿಸುವ ಮೂಲಕ ಬಿ2 ಗ್ರೇಡ್(ಪ್ರಥಮ ದರ್ಜೆ) ಪಡೆದರೆ, 7 ವಿದ್ಯಾರ್ಥಿಗಳು ಸಿ ಗ್ರೇಡ್ ಮತ್ತು ಒಬ್ಬರು ಡಿ ಗ್ರೇಡ್‌ನಲ್ಲಿ ಪಾಸ್ ಆಗಿದ್ದಾರೆ ಎಂದೂ ಅವರು ತಿಳಿಸಿದ್ದಾರೆ.

ಬ್ರೈಲ್ ಪಠ್ಯಪುಸ್ತಕಗಳ ಮೂಲಕ ಈ ಮಕ್ಕಳಿಗೆ ಶಿಕ್ಷಣ ನೀಡಲಾಗಿದೆ. ಸಹಾಯಕರೊಬ್ಬರ ಮೂಲಕ ಅವರು ಪರೀಕ್ಷೆ ಬರೆದಿದ್ದಾರೆ.

ಬಿ2 ಗ್ರೇಡ್ ಪಡೆದಿರುವ ವಿದ್ಯಾರ್ಥಿನಿ ಭಾರತಿ ಬಿಸೋಯಿ ಸೇರಿದಂತೆ ಎಲ್ಲ 9 ಮಂದಿ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯುವ ಇಚ್ಛೆಯಲ್ಲಿದ್ದಾರೆ.