Saturday, 14th December 2024

ಬಿ.ಎಲ್‌.ಸಂತೋಷ್’ಗೆ ನೋಟಿಸ್‌: ಡಿ.13ರವರೆಗೆ ತಡೆಯಾಜ್ಞೆ

ಹೈದರಾಬಾದ್‌: ಬಿಆರ್‌ಎಸ್‌ ಶಾಸಕರ ಖರೀದಿಗೆ ಯತ್ನ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್’ರಿಗೆ ವಿಶೇಷ ತನಿಖಾ ತಂಡ ಜಾರಿ ಮಾಡಿದ್ದ ನೋಟಿಸ್‌ಗೆ ನೀಡಿದ್ದ ತಡೆಯಾಜ್ಞೆಯನ್ನು ತೆಲಂಗಾಣ ಹೈಕೋರ್ಟ್ ಡಿ.13ರವರೆಗೆ ವಿಸ್ತರಿಸಿದೆ.

ನ್ಯಾಯಮೂರ್ತಿ ಕೆ. ಸುರೇಂದರ್‌ ಅವರು ತಡೆಯಾಜ್ಞೆಯನ್ನು ವಿಸ್ತರಿಸಿದ್ದಾರೆ.

ಬಿಜೆಪಿಯ ಏಜೆಂಟರು ಎನ್ನಲಾಗಿರುವ ದೆಹಲಿಯ ಮೂವರು ವ್ಯಕ್ತಿಗಳು ಹಾಗೂ ಬಿಆರ್‌ಎಸ್‌ ಶಾಸಕರ ನಡುವಣ ವಿಡಿಯೊ ಸಂವಾದದಲ್ಲಿ ಸಂತೋಷ್‌ ಅವರ ಹೆಸರು ಹಲವು ಬಾರಿ ಉಲ್ಲೇಖವಾಗಿತ್ತು.

ಈ ವಿಡಿಯೊವನ್ನು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್‌ ರಾವ್‌ ಅವರು ನ. 3ರಂದು ಬಿಡುಗಡೆ ಮಾಡಿದ್ದರು.