Wednesday, 23rd October 2024

Anti Terror Protocols: ಹುಸಿ ಬೆದರಿಕೆ ಎನ್ನುವುದು ಗೊತ್ತಿದ್ದರೂ ವಿಮಾನ ಭದ್ರತಾ ಸಿಬ್ಬಂದಿ ತೀವ್ರ ತಪಾಸಣೆ ನಡೆಸುವುದೇಕೆ ಗೊತ್ತೆ?

Bomb Threat

ಕಳೆದ ಒಂದೆರಡು ವಾರಗಳಿಂದ 12ಕ್ಕೂ ಹೆಚ್ಚು ಭಾರತೀಯ ವಿಮಾನಗಳಿಗೆ (indian airlines) ಬೆದರಿಕೆಗಳು (Anti Terror Protocols) ಬಂದಿವೆ. ಆದರೆ ಅವೆಲ್ಲವೂ ಸುಳ್ಳು ಎಂಬುದು ಗೊತ್ತಾದ ಮೇಲೂ ಆತಂಕ ಮುಂದುವರಿದಿದೆ. ವಿಮಾನಗಳಿಗೆ ಬಾಂಬ್ ಬೆದರಿಕೆಗಳು ಬಂದಾಗ ಸಾಕಷ್ಟು ಭದ್ರತಾ ನಿಯಮಗಳು (security protocol) ಪಾಲಿಸಬೇಕಾಗುತ್ತದೆ.

ಸತತ ಬಾಂಬ್ ಬೆದರಿಕೆ ಕರೆಗಳು ವಿಮಾನಯಾನ ಸಂಸ್ಥೆಗಳನ್ನು ತಲ್ಲಣಗೊಳಿಸಿದ್ದು, ವಾಯುಯಾನದ ಸುರಕ್ಷತೆ ಬಗ್ಗೆ ಆತಂಕವನ್ನು ಹುಟ್ಟು ಹಾಕಿದೆ. ಇದರಿಂದ ವಿಮಾನಯಾನ ಕಾರ್ಯಾಚರಣೆಯ ಮೇಲೆ ತೀವ್ರ ಪರಿಣಾಮ ಬೀರಿದೆ. ಸಾಕಷ್ಟು ಪ್ರಯಾಣಿಕರು, ಸಿಬ್ಬಂದಿ ಇದರಿಂದ ತೊಂದರೆ ಅನುಭವಿಸುವಂತಾಗಿದೆ. ಬಾಂಬ್ ಬೆದರಿಕೆ ಬಂದ ತಕ್ಷಣ ನಿಯಮಗಳ ಪ್ರಕಾರ ವಿಮಾನಯಾನ ಸಂಸ್ಥೆಗಳು ಹೆಚ್ಚಿನ ಸಹಾಯ ಮತ್ತು ತನಿಖೆಗಾಗಿ ನಾಗರಿಕ ವಿಮಾನಯಾನ ಸಚಿವಾಲಯವನ್ನು (Ministry of Civil Aviation) ಸಂಪರ್ಕಿಸಿತು. ಈ ವೇಳೆ ಶೇ. 99.99ರಷ್ಟು ಬೆದರಿಕೆಗಳು ನಕಲಿ ಎಂದು ತಿಳಿದು ಬಂತು.

ಪ್ರತಿಯೊಂದು ಬಾಂಬ್ ಬೆದರಿಕೆ ಕರೆಗಳನ್ನೂ ಗಂಭೀರವಾಗಿ ಪರಿಗಣಿಸಿರುವುದರಿಂದ ಭಾರತೀಯ ವಿಮಾನ ನಿಲ್ದಾಣಗಳಲ್ಲಿ ಕಟ್ಟುನಿಟ್ಟಿನ ವಿಮಾನ ನಿರ್ಗಮನ ಪೂರ್ವ ಭದ್ರತಾ ತಪಾಸಣೆಗಳನ್ನು ನಡೆಸಲಾಗುತ್ತಿದೆ.

Bomb Threat

ವಿಮಾನಕ್ಕೆ ಬಾಂಬ್ ಬೆದರಿಕೆ ಬಂದಾಗ ಏನು ಮಾಡಲಾಗುತ್ತದೆ?

ವಾಯುಯಾನ ಮಾಡುತ್ತಿರುವಾಗ ವಿಮಾನಕ್ಕೆ ಬಾಂಬ್ ಬೆದರಿಕೆ ಬಂದರೆ ಎಚ್ಚರಿಕೆ ಸಂದೇಶ ನೀಡಲಾಗುತ್ತದೆ. ವಿಮಾನ ನಿಲ್ದಾಣದಲ್ಲಿ ಬಾಂಬ್ ಬೆದರಿಕೆ ಮೌಲ್ಯಮಾಪನ ಸಮಿತಿ (BTAC) ತಕ್ಷಣ ಸಭೆ ನಡೆಸಿ ಬೆದರಿಕೆಯ ಕುರಿತು ಮುಂದಿನ ಕ್ರಮದ ಬಗ್ಗೆ ಚರ್ಚಿಸಿ ನಿರ್ಣಯ ಕೈಗೊಳ್ಳಲಾಗುತ್ತದೆ.

ಬೆದರಿಕೆಯ ಪರಿಶೀಲನೆ ಬಳಿಕ ಏರ್ ಟ್ರಾಫಿಕ್ ಕಂಟ್ರೋಲ್ (ATC) ಅನ್ನು ಸಂಪರ್ಕಿಸಿ ಪೈಲಟ್‌ಗಳಿಗೆ ಮುಂದಿನ ನಡೆಯ ಬಗ್ಗೆ ಸೂಚನೆ ನೀಡಲಾಗುತ್ತದೆ. ಹಾರಾಟದ ಸ್ಥಳವನ್ನು ಆಧರಿಸಿ ನಿರ್ಗಮನ ವಿಮಾನ ನಿಲ್ದಾಣಕ್ಕೆ ಹಿಂತಿರುಗಲು, ನಿರ್ಧರಿಸಿದ ಗಮ್ಯಸ್ಥಾನಕ್ಕೆ ಹೋಗಲು ಅಥವಾ ಹತ್ತಿರದ ವಿಮಾನ ನಿಲ್ದಾಣಕ್ಕೆ ವಿಮಾನವನ್ನು ತಿರುಗಿಸಲು ಪೈಲಟ್‌ಗಳಿಗೆ ಸೂಚಿಸಲಾಗುತ್ತದೆ. ಟೇಕಾಫ್ ಆಗದ ವಿಮಾನಕ್ಕೆ ಬೆದರಿಕೆ ಬಂದರೆ ಬಾಂಬ್ ಬೆದರಿಕೆ ಮೌಲ್ಯಮಾಪನ ಸಮಿತಿಯನ್ನು ಸಂಪರ್ಕಿಸಿದ ಅನಂತರ ಸಂಪೂರ್ಣ ಭದ್ರತಾ ತಪಾಸಣೆಗಾಗಿ ವಿಮಾನವನ್ನು ನಿಲ್ಲಿಸಲಾಗುತ್ತದೆ.

Bahraich Violence: ಉ. ಪ್ರದೇಶದ ಬಹ್ರೈಚ್‌ ಇನ್ನೂ ಬೂದಿ ಮುಚ್ಚಿದ ಕೆಂಡ

ಭಾರತೀಯ ವಾಯುಪ್ರದೇಶದಿಂದ ಹೊರಗಿರುವ ಅಂತಾರಾಷ್ಟ್ರೀಯ ವಿಮಾನಕ್ಕೆ ಬಾಂಬ್ ಬೆದರಿಕೆ ಬಂದರೆ ಭಾರತೀಯ ಏಜೆನ್ಸಿಗಳು ಅಂತಾರಾಷ್ಟ್ರೀಯ ಬಾಂಬ್ ಬೆದರಿಕೆ ಮೌಲ್ಯಮಾಪನ ಸಮಿತಿ ಮತ್ತು ಭದ್ರತಾ ಏಜೆನ್ಸಿಗಳನ್ನು ಸಂಪರ್ಕಿಸಿ ಮುಂದಿನ ಕ್ರಮದ ಕುರಿತು ನಿರ್ಧಾರ ಮಾಡಲಾಗುತ್ತದೆ. ಇಂತಹ ಸಂದರ್ಭಗಳಲ್ಲಿ ವಿಮಾನವನ್ನು ಸಾಮಾನ್ಯವಾಗಿ ಹತ್ತಿರದ ವಿಮಾನ ನಿಲ್ದಾಣಕ್ಕೆ ತಿರುಗಿಸಲಾಗುತ್ತದೆ. ಸತತ ಬಾಂಬ್ ಬೆದರಿಕೆಗಳ ಸಮಸ್ಯೆಯನ್ನು ಪರಿಹರಿಸಲು ಭಾರತ ಸರ್ಕಾರ ಮತ್ತು ನಾಗರಿಕ ವಿಮಾನಯಾನ ಸಚಿವಾಲಯ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ಬಂದಿದ್ದು ಹುಸಿ ಬೆದರಿಕೆ ಕರೆ ಎನ್ನುವುದು ಬಹುತೇಕ ಖಾತರಿಯಾಗಿದ್ದರೂ ಭದ್ರತಾ ಸಿಬ್ಬಂದಿ ನಿಯಮ ಪ್ರಕಾರ ತಪಾಸಣೆ ನಡೆಸಲೇಬೇಕಾಗುತ್ತದೆ!