Sunday, 15th December 2024

ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಬಾಂಬ್ ಸ್ಫೋಟದ ಬೆದರಿಕೆ: ನಾಲ್ವರ ಬಂಧನ

ಹಮದಾಬಾದ್: ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ ಪತ್ರ ಬರೆದಿದ್ದ ನಾಲ್ವರು ಆರೋಪಿಗಳನ್ನು ಗುರುವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತ ಆರೋಪಿಗಳು ಬೆದರಿಕೆ ಪತ್ರದಲ್ಲಿ ಅಹಮದಾಬಾದ್ ರೈಲು ನಿಲ್ದಾಣ ಮತ್ತು ಗೀತಾ ಮಂದಿರ ಬಸ್ ನಿಲ್ದಾಣದಲ್ಲಿ ಬಾಂಬ್ ಸ್ಫೋಟಿಸುವ ಬಗ್ಗೆ ಉಲ್ಲೇಖಿಸಿದ್ದರು. ಆರೋಪಿಗಳ ಪತ್ತೆಗೆ ಅಹಮದಾಬಾದ್ ಅಪರಾಧ ವಿಭಾಗ ಕಾರ್ಯಾಚರಣೆ ನಡೆಸಿತ್ತು.

ಆರೋಪಿಗಳು ಬೆದರಿಕೆ ಪತ್ರವನ್ನು ಅಹಮದಾಬಾದ್ ಪೊಲೀಸ್ ಕಮಿಷನರ್ ಕಚೇರಿಗೆ ಕಳುಹಿಸಿದ್ದರು ಎಂದು ಅಪರಾಧ ವಿಭಾಗದ ಡಿಸಿಪಿ ಚೈತನ್ಯ ಮಾಂಡ್ಲಿಕ್ ತಿಳಿಸಿದ್ದಾರೆ.

ನಾಲ್ವರಲ್ಲಿ ಇಬ್ಬರನ್ನು ಅಹಮದಾಬಾದ್‌ನಲ್ಲಿ ಬಂಧಿಸಲಾಗಿದ್ದು, ಮತ್ತಿಬ್ಬರನ್ನು ಉತ್ತರ ಪ್ರದೇಶದ ಬಲ್ಲಿಯಾದಲ್ಲಿ ಬಂಧಿಸಲಾಗಿದೆ ಎಂದು ಚೈತನ್ಯ ಮಾಹಿತಿ ನೀಡಿದ್ದಾರೆ.