Thursday, 12th December 2024

ಚಂದಾ ಕೊಚ್ಚರ್ ಬಂಧನ ಕಾನೂನುಬಾಹಿರ: ಬಾಂಬೆ ಹೈಕೋರ್ಟ್

ಮುಂಬೈ: ಐಸಿಐಸಿಐ ಬ್ಯಾಂಕ್ ಮತ್ತು ವಿಡಿಯೋಕಾನ್ ಸಾಲ ವಂಚನೆ ಪ್ರಕರಣದಲ್ಲಿ ಐಸಿಐಸಿಐ ಬ್ಯಾಂಕ್ ಮಾಜಿ ಸಿಇಒ ಮತ್ತು ಎಂಡಿ ಚಂದಾ ಕೊಚ್ಚರ್ ಮತ್ತು ಅವರ ಪತಿ ದೀಪಕ್ ಕೊಚ್ಚರ್ ಅವರ ಬಂಧನವನ್ನ ಕಾನೂನುಬಾಹಿರ ಎಂದು ಬಾಂಬೆ ಹೈಕೋರ್ಟ್ ಹೇಳಿದೆ.

ನ್ಯಾಯಮೂರ್ತಿ ಅನುಜಾ ಪಬುದೇಸಾಯಿ ಈ ಆದೇಶ ನೀಡಿದ್ದಾರೆ.

ಅಂದ್ಹಾಗೆ, ಅವರ ಬಂಧನವು ಸಿಆರ್ಪಿಸಿಯ ಸೆಕ್ಷನ್ ಗೆ ಅನುಗುಣವಾಗಿಲ್ಲ ಎಂದು ಸಮನ್ವಯ ಪೀಠವು ಅಭಿಪ್ರಾಯಪಟ್ಟ ನಂತರ 2023ರ ಜನವರಿ ಯಲ್ಲಿ ಮಧ್ಯಂತರ ಆದೇಶದ ಮೂಲಕ ಇವರಿಬ್ಬರನ್ನು ಬಿಡುಗಡೆ ಮಾಡಲಾಯಿತು.

ಸಿಬಿಐಗೆ ತಮ್ಮ ಕಸ್ಟಡಿಯನ್ನು ನೀಡುವಾಗ ನ್ಯಾಯಾಧೀಶರು ತಮ್ಮ ಸ್ವಂತ ತೃಪ್ತಿಯನ್ನ ಸರಿಯಾಗಿ ದಾಖಲಿಸಲು ವಿಫಲರಾಗಿದ್ದಾರೆ ಎಂದು ನ್ಯಾಯಾಲಯ ಗಮನಿಸಿದೆ.