Thursday, 12th December 2024

ಜು.15ರಿಂದ ದುಬೈಗೆ ವಿಮಾನ ಬುಕ್ಕಿಂಗ್ ಆರಂಭ

ನವದೆಹಲಿ : ಜುಲೈ 15ರಿಂದ ಭಾರತದ ಹಲವಾರು ನಗರಗಳಿಂದ ದುಬೈಗೆ ತೆರಳಲು ವಿಮಾನ ಬುಕಿಂಗ್ ಮತ್ತೆ ಆರಂಭವಾಗಲಿದೆ.

ಮುಂಬೈ (ಬಿಒಎಂ) ನಿಂದ ದುಬೈ (ಡಿಎಕ್ಸ್ ಬಿ) ವರೆಗಿನ ಪ್ರಯಾಣ ದರ ₹17,602 ರಿಂದ ಪ್ರಾರಂಭವಾಗುತ್ತದೆ. ದೆಹಲಿಯಿಂದ ದುಬೈಗೆ ವಿಮಾನ ದರ ₹13,816 ಆಗಿದೆ. ಇಂಡಿಗೊ ಏರ್ ಲೈನ್ಸ್ ಹೆಚ್ಚುವರಿಯಾಗಿ ತಮ್ಮ ವೆಬ್ ಸೈಟ್ʼನಲ್ಲಿ ಬುಕಿಂಗ್ ಪ್ರಾರಂಭಿಸಿದೆ.

ಮುಂಬೈನಿಂದ ದುಬೈಗೆ ಇಂಡಿಗೊ ಏರ್ ಲೈನ್ಸ್ ದರಗಳು ₹21,000 ರಿಂದ ₹29,000 ಕ್ಕೆ ಏರಿಕೆಯಾಗಿವೆ. ಕೊಚ್ಚಿಯಿಂದ ಇಂಡಿಗೊ ವಿಮಾನ ಟಿಕೆಟ್ʼಗಳು ₹31,181 ರವರೆಗೆ ಬೆಲೆ ಬಾಳಬಹುದು. ಕೆಲವು ವಿಮಾನಗಳನ್ನ ₹23,959 ಕ್ಕೂ ಸಹ ಕಾಣಬಹುದು. ಹೈದರಾಬಾದ್ ನಿಂದ ದುಬೈಗೆ ವಿಮಾನ ದರಗಳು ₹23,234 ರಿಂದ ₹28,727 ಕ್ಕೆ ಏರಿಳಿತಗೊಳ್ಳುತ್ತವೆ. ಮುಖ್ಯವಾಗಿ, ವಿಮಾನಯಾನ ಸಂಸ್ಥೆಗಳ ವೆಬ್ ಸೈಟ್ ಗಳ ಪ್ರಕಾರ ದುಬೈಗೆ ಸಂಪರ್ಕಿಸುವ ವಿಮಾನ ಗಳಿವೆ.