Thursday, 12th December 2024

ಮೇಘಸ್ಫೋಟ: ಬಾಲಕ ಸಾವು

ಧರ್ಮಶಾಲಾ: ಎಡೆಬಿಡದೆ ಸುರಿಯುತ್ತಿರುವ ಭಾರೀ ಮಳೆಯ ಆರ್ಭಟಕ್ಕೆ ಹಿಮಾಚಲ ಪ್ರದೇಶದ ಚಂಬಾ ಪ್ರದೇಶದಲ್ಲಿ ಸೋಮವಾರ ಮೇಘಸ್ಫೋಟ ಗೊಂಡಿದ್ದು, 15 ವರ್ಷದ ಬಾಲಕ ಮೃತಪಟ್ಟಿದ್ದಾನೆ.

ಮಳೆಗೆ ಕೆಲವು ಮನೆಗಳು ನೀರಿನ ಆವೃತಗೊಂಡಿದೆ. ಜನರನ್ನು ಸ್ಥಳಾಂತರಿ ಸಲು ಅಧಿಕಾರಿಗಳು ತಿಳಿಸಿದ್ದಾರೆ. ಚಂಬಾ ಜಿಲ್ಲಾ ತುರ್ತು ಕಾರ್ಯಾಚರಣೆ ಕೇಂದ್ರ (ಡಿಇಒಸಿ) ಭಾನುವಾರ ಮತ್ತು ಸೋಮವಾರ ಭಡೋಗಾ ಮತ್ತು ಕಂಧ್ವಾರಾ ಗ್ರಾಮಗಳು ಹಠಾತ್ ಭಾರಿ ಮಳೆಯಿಂದ ಹಾನಿಗೀಡಾಗಿವೆ ಎಂದು ಹೇಳಿದೆ.

ಭಾರೀ ಮಳೆಗೆ ನೀರು ಉಕ್ಕಿ ಹರಿಯುವಿಕೆಯಿಂದಾಗಿ ಗುಲೇಲ್ ಗ್ರಾಮದಲ್ಲಿನ ಐದು ಮನೆಗಳ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಇಲಾಖೆ ತಿಳಿಸಿದೆ.