Thursday, 12th December 2024

ಮ್ಯಾಗಿ ಸೇವಿಸಿ ಬಾಲಕ ಸಾವು

ಕ್ನೋ: ಮ್ಯಾಗಿ ಸೇವಿಸಿ 10 ವರ್ಷದ ಬಾಲಕ ಮೃತಪಟ್ಟಿದ್ದಾನೆ. ಒಂದೇ ಕುಟುಂಬದ ಐವರು ಅಸ್ವಸ್ಥರಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಘಟನೆ ಉತ್ತರ ಪ್ರದೇಶದ ಪಿಲಿಭಿಟ್‌ನಲ್ಲಿ ನಡೆದಿದೆ.

ಪುರಾನ್‌ಪುರದ ಸಿಎಚ್‌ಸಿಯಲ್ಲಿ ಐವರೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಹಜಾರ ಪೊಲೀಸ್‌ ಠಾಣೆ ವ್ಯಾಪ್ತಿಯ ರಾಹುಲ್‌ ನಗರದಲ್ಲಿ ಘಟನೆ ನಡೆದಿದೆ.

ಕಳೆದ ರಾತ್ರಿ ಮೂವರು ಮಕ್ಕಳು ಸೇರಿ ಎಲ್ಲರೂ ಮ್ಯಾಗಿ ಹಾಗೂ ಅನ್ನ ಊಟ ಮಾಡಿದ್ದಾರೆ. ರಾತ್ರಿ ಮಲಗಿದವರೇ ಒಬ್ಬೊಬ್ಬರಾಗಿ ಅಸ್ವಸ್ಥರಾಗಿದ್ದಾರೆ.

ವಾಂತಿ-ಭೇದಿ ಕಾಣಿಸಿಕೊಂಡಿದೆ.ಎಲ್ಲರೂ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆದರೆ, ಚಿಕಿತ್ಸೆ ಫಲಿಸದೆ 10 ವರ್ಷದ ಬಾಲಕನು ಮೃತಪಟ್ಟಿದ್ದಾನೆ.