Thursday, 12th December 2024

ಹೋಳಿ ಆಟ ಮುಗಿಸಿ ಸ್ನಾನ ಮಾಡುತ್ತಿದ್ದ ಬಾಲಕರ ಮುಳುಗಿ ಸಾವು

ಜಾಜ್‌ಪುರ: ಒಡಿಶಾದ ಜಾಜ್‌ಪುರದಲ್ಲಿ ಹೋಳಿ ಆಟ ಮುಗಿಸಿ ಸ್ನಾನ ಮಾಡುತ್ತಿದ್ದ ಆರು ಬಾಲಕರು ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಜಾಜ್ ಪುರದ ಖರಾಸ್ರೋಟಾ ನದಿದಡದಲ್ಲಿ ಹೋಳಿ ಆಟ ಮುಗಿಸಿ ಸ್ನಾನ ಮಾಡುತ್ತಿದ್ದ ಆರು ಬಾಲಕರು ನದಿಯಲ್ಲಿ ಮುಳುಗಿ  ಮೃತಪಟ್ಟಿದ್ದಾರೆ.

ವಿಚಾರ ತಿಳಿದ ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಪಡೆ ಮತ್ತು ಸ್ಥಳೀಯರು ಶೋಧ ಕಾರ್ಯಾಚರಣೆ ನಡೆಸಿ ಈ ವರೆಗೂ 3 ಬಾಲಕರ ಶವಗಳನ್ನು ಹೊರಕ್ಕೆ ತೆಗೆದಿ ದ್ದಾರೆ.

ಮೂವರ ಮೃತದೇಹಗಳು ಪತ್ತೆಯಾಗಿದ್ದು, ನಾಪತ್ತೆಯಾಗಿರುವ ಇತರ ಮೂವರ ಪತ್ತೆ ಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಜಿಲ್ಲಾ ಸಹಾಯಕ ಅಗ್ನಿಶಾಮಕ ಅಧಿಕಾರಿ ಪೂರ್ಣ ಚಂದ್ರ ಮರಾಂಡಿ ತಿಳಿಸಿದ್ದಾರೆ.

ಕಡಿಮೆ ಬೆಳಕಿನಿಂದ ಶೋಧ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದರಿಂದ, ಅಗ್ನಿಶಾಮಕ ಇಲಾಖೆ ಮತ್ತು ಒಡಿಶಾ ವಿಪತ್ತು ಕ್ಷಿಪ್ರ ಕಾರ್ಯಾಚರಣೆ ಪಡೆ ಮತ್ತೆ ರಕ್ಷಣಾ ಕಾರ್ಯಾಚರಣೆ ಪ್ರಾರಂಭಿಸಿದೆ.