Wednesday, 9th October 2024

ಬ್ರೇಕ್ ದಿ ಬಯಾಸ್ ಮೂಲಕ ಅಮೆಜಾ಼ನ್ `ಶೆಲ್ಸ್ ಅಮೆಜಾ಼ನ್ ಅಭಿಯಾನ

ನವದೆಹಲಿ: ಅಂತಾರಾಷ್ಟ್ರೀಯ ಮಹಿಳಾ ದಿನದಂದು ಅಮೆಜಾ಼ನ್ ಇಂಡಿಯಾ ಮಹತ್ತರ ಎತ್ತರಗಳನ್ನು ಏರಲು ಆವಿಷ್ಕರಿಸುವ, ನೇತೃತ್ವ ವಹಿಸುವ ಹಾಗೂ ಇತರರಿಗೆ ಸ್ಫೂರ್ತಿ ತುಂಬುವ ಮಹಿಳೆಯರನ್ನು ಗೌರವಿಸುತ್ತಿದೆ. ಈ ವರ್ಷದ ವಿಷಯವಾದ `ಬ್ರೇಕ್ ದಿ ಬಯಾಸ್ (ಪೂರ್ವಾಗ್ರಹಗಳನ್ನು ಮುರಿಯಿರಿ)’ ಮೂಲಕ ಅಮೆಜಾ಼ನ್ `ಶೆಲ್ಸ್ ಅಮೆಜಾ಼ನ್ ಎಂಬ ಅಭಿಯಾನ ಪ್ರಾರಂಭಿಸುತ್ತಿದ್ದು ಸಾಮಾಜಿಕ, ಸಾಂಸ್ಕೃತಿಕ, ವಿಕಲತೆ ಮತ್ತು ಆರ್ಥಿಕ ಅಡೆತಡೆಗಳನ್ನು ಮೀರಿ ಅವರ ಕನಸುಗಳನ್ನು ಈಡೇರಿಸಿಕೊಂಡ ಮಹಿಳಾ ಉದ್ಯೋಗಿಗಳು, ಸಹವರ್ತಿಗಳು ಮತ್ತು ಪಾಲುದಾರರು ಅಲ್ಲದೆ ವೇಗವಾಗಿ ಬೆಳೆಯುತ್ತಿರುವ ಇ-ಕಾಮರ್ಸ್ ಉದ್ಯಮದಲ್ಲಿ ಶಕ್ತಿಯುತ ಪಾತ್ರ ವಹಿಸುತ್ತಿರುವ ಮಹಿಳೆಯರನ್ನು ಬೆಳಕಿಗೆ ತರುತ್ತಿದೆ.

ಈ ಅಭಿಯಾನದ ಭಾಗವಾಗಿ ಅಮೆಜಾ಼ನ್ ಕಾಫಿ ಟೇಬಲ್ ಪುಸ್ತಕ ಬಿಡುಗಡೆ ಮಾಡು ತ್ತಿದ್ದು ಇದು ನಿಮಗೆ ಈ ಮಹಿಳೆಯರ ವೃತ್ತಿ ಹಾಗೂ ವೈಕ್ತಿಕ ಜೀವನಗಳು, ಮತ್ತು ಅವರ ಭರವಸೆಯ, ಹೋರಾಟದ ಮತ್ತು ಯಶಸ್ಸಿನ ಪ್ರಯಾಣದ ಕುರಿತು ಒಳನೋಟ ನೀಡಲಿದೆ. ಈ ಕಾಫಿ ಟೇಬಲ್ ಪುಸ್ತಕದ ಮುನ್ನುಡಿಯನ್ನು ಭಾರತ ಸರ್ಕಾರದ ಮಾಜಿ ಕಾರ್ಯದರ್ಶಿ ಡಾ.ಅರುಣಾ ಶರ್ಮಾ, ಐಎಎಸ್ ಬರೆದಿದ್ದಾರೆ, ಅವರು ಕೆಲಸದ ಸ್ಥಳದಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಒತ್ತಿ ಹೇಳಿದ್ದಲ್ಲದೆ ನಿಜವಾದ ಸ್ವಾವ ಲಂಬಿ ಭಾರತದ ಗುರಿಯನ್ನು ಈಡೇರಿಸು ವಲ್ಲಿ ಮಹಿಳೆಯರ ಭಾಗವಹಿಸುವಿಕೆ ಹೆಚ್ಚಬೇಕು ಎಂದು ಪ್ರತಿಪಾದಿಸಿದ್ದರು.

ಈ ಅಭಿಯಾನದ ಕುರಿತು ತಮ್ಮ ಅಭಿಪ್ರಾಯಗಳನ್ನು ಅಮೆಜಾ಼ನ್‌ನ ಡಿಇ ಅಂಡ್ ಐ, ಅಂತಾರಾಷ್ಟ್ರೀಯ ಮಾರುಕಟ್ಟೆಗಳು, ಡಬ್ಲೂö್ಯ ಡಬ್ಲೂö್ಯ ಕನ್ಸೂಮರ್‌ನ ನಿರ್ದೇಶಕಿ ಶ್ರೀಮತಿ ಸ್ವಾತಿ ರುಸ್ತೋಗಿ, “ಅಮೆಜಾ಼ನ್‌ನಲ್ಲಿ ನಮ್ಮ ನಿರ್ಧಾರ ಕೈಗೊಳ್ಳುವ ಕೇಂದ್ರದಲ್ಲಿ ಎಲ್ಲರನ್ನೂ ಒಳಗೊಳ್ಳುವುದು ಇದೆ ಮತ್ತು ಇದು ಸಮಾಜಕ್ಕೆ ಮಾತ್ರವಲ್ಲದೆ ಉದ್ಯಮಕ್ಕೆ ಉತ್ತಮ ಎಂದು ನಾವು ನಂಬುತ್ತೇವೆ.

`ಶೆಲ್ಸ್ಅಮೆಜಾ಼ನ್’ ಅಮೆe಼Áನ್ ಇಂಡಿಯಾದಾದ್ಯಂತ ಹಲವು ಮಹಿಳೆಯರ ಮಹತ್ತರ ಕಾರ್ಯವನ್ನು ಗುರುತಿಸುವ ಸರಳ ಪ್ರಯತ್ನ ವಷ್ಟೇ. ಪ್ರತಿದಿನವೂ ಸಾವಿರಾರು ಮಂದಿ ಪೂರ್ವಾಗ್ರಹಗಳನ್ನು ಮುರಿಯುತ್ತಿದ್ದಾರೆ ಮತ್ತು ಅಸಾಂಪ್ರದಾಯಿಕ ಜವಾಬ್ದಾರಿಗಳು ಮತ್ತು ವೃತ್ತಿಗಳಲ್ಲಿ ಯಶಸ್ವಿಯಾಗುತ್ತಿದ್ದಾರೆ. ಅಮೆಜಾ಼ನ್ ಎಲ್ಲರನ್ನೂ ಒಳಗೊಳ್ಳುವ ಮತ್ತು ಪ್ರಗತಿಶೀಲವಾಗಿರುವಂತೆ ಮಾಡಿರುವುದಕ್ಕೆ ಈ ಎಲ್ಲ ಅಸಾಮಾನ್ಯ ಮಹಿಳೆಯರಿಗೆ ನಾವು ಕೃತಜ್ಞರಾಗಿದ್ದೇವೆ” ಎಂದರು.

ಅಮೆಜಾ಼ನ್ ಇಂಡಿಯಾ ಮುಂಚೂಣಿಯ ಕಾರ್ಯಕ್ರಮಗಳ ಮೂಲಕ ಉದ್ಯೋಗದ ಸ್ಥಳದಲ್ಲಿ ವೈವಿಧ್ಯತೆ ನಿರ್ಮಿಸುವಲ್ಲಿ ಹಾಗೂ ಸೇರ್ಪಡಿಕೆ ಉಪಕ್ರಮಗಳಿಗೆ ಗಮನಾರ್ಹ ಪ್ರಯತ್ನಗಳನ್ನು ನಡೆಸಿದೆ. ಉದಾಹರಣೆಗೆ, ರೀಕಿಂಡಲ್ ಕಾರ್ಯಕ್ರಮ ಮಹಿಳೆಯರಿಗೆ ಅವರನ್ನು ವೃತ್ತಿಪರವಾಗಿ ಮರು ಸಂಯೋಜನೆಗೊಳ್ಳಲು ಬಯಸುವ ಮಹಿಳೆಯರಿಗೆ ಅವಕಾಶಗಳನ್ನು ನೀಡುತ್ತದೆ ಮತ್ತು ಹಾಗೂ ಕೊಂಚ ಬಿಡುವಿನ ನಂತರ ಅವರ ಕಾರ್ಪೊರೇಟ್ ವೃತ್ತಿಯನ್ನು ಮರು ಪ್ರಾರಂಭಿಸಲು ಬೆಂಬಲಿಸುತ್ತದೆ; ರಚನಾತ್ಮಕ ಆನ್-ಬೋರ್ಡಿಂಗ್, ಕೇಂದ್ರೀಕೃತ ಮಾರ್ಗದರ್ಶನ, ಅನುಕೂಲಕರ ಕೆಲಸದ ಆಯ್ಕೆಗಳು ಮತ್ತು ಉದ್ಯೋಗದಲ್ಲಿ ಕಲಿಕೆ ಈ ಕಾರ್ಯಕ್ರಮದ ಪ್ರಮುಖ ಅಂಶಗಳಾಗಿವೆ.

ತಂತ್ರಜ್ಞಾನದಲ್ಲಿರುವ ಮಹಿಳೆಯರಿಗೆ ವಿಶೇಷವಾಗಿ ರೂಪಿಸಲಾದ ಕಾರ್ಯಕ್ರಮ `ಅಮೆಜಾ಼ನ್ ವೌ’ ಎಂಜಿನಿಯರಿ0ಗ್ ವಿದ್ಯಾರ್ಥಿಗಳಿಗೆ ತಂತ್ರಜ್ಞಾನದಲ್ಲಿ ದೀರ್ಘಾವಧಿ ವೃತ್ತಿಗಳನ್ನು ಬೆಳೆಸಿಕೊಳ್ಳಲು ನೆರವಾಗುತ್ತದೆ; ಅವರು ಅಮೆಜಾ಼ನ್ ನಾಯಕರೊಂದಿಗೆ ಸಂವಹನ ನಡೆಸ ಬಹುದು, ಕಾರ್ಯಾಗಾರಗಳಲ್ಲಿ ಭಾಗವಹಿಸಬಹದು, ವೃತ್ತಿ ಅನುಭವಗಳಿಗೆ ಅಲುಮ್ನಿಯೊಂದಿಗೆ ಸಂಪರ್ಕ ಹೊಂದಬಹುದು ಮತ್ತು ಅಮೆಜಾ಼ನ್‌ನಲ್ಲಿ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಬಹುದು. ಮಿಲಿಟರಿ ವೆಟರನ್ಸ್ ಎಂಪ್ಲಾಯ್‌ಮೆಂಟ್ ಪ್ರೋಗ್ರಾಮ್(ಎಂವಿಇಪಿ) ಮಿಲಿಟರಿ ವೆಟರನ್ಸ್ ಹಾಗೂ ಅವರ ಪತ್ನಿಯರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ. ಎಂವಿಇಪಿ ಅಡಿಯಲ್ಲಿ ಅಮೆಜಾ಼ನ್ ಮಿಲಿಟರಿ ಅಂಬಾಸರ‍್ಸ್ ಗುಂಪು ಹೊಂದಿದ್ದು ಅದು ವೆಟರನ್‌ಗಳ ನಿರ್ದಿಷ್ಟ ಅಭಿವೃದ್ಧಿ ಅಗತ್ಯಗಳಿಗೆ ಆದ್ಯತೆ ನೀಡುತ್ತದೆ ಮತ್ತು ಅವರಿಗೆ ಬೆಂಬಲಿಸಲು ವಿಶೇಷವಾದ ತರಬೇತಿ ಕಾರ್ಯಕ್ರಮಗಳನ್ನು ರೂಪಿಸಿದ್ದು ಅದು ಕಾರ್ಪೊರೇಟ್ ಜಗತ್ತಿಗೆ ಪರಿವರ್ತನೆ ನೀಡುತ್ತದೆ.

ತಮ್ಮ ಅನುಭವ ಕುರಿತು ಅಮೆಜಾ಼ನ್ ಇಂಡಿಯಾ ಫುಲ್‌ಫಿಲ್‌ಮೆಂಟ್ ಸೆಂಟರ್ ಅಸೋಸಿಯೇಟ್ ಆಗಿರುವ ಮಂಗಳಮುಖಿ ಸಿಂಧು ಮೇರಿ, “ನನ್ನ ಕೆಲಸದ ಸ್ಥಳದಲ್ಲಿ ಸಮಾನರಂತೆ ನೋಡುತ್ತಿರುವುದಕ್ಕೆ ನನಗೆ ಬಹಳ ಸಂತೋಷವಾಗಿದೆ. ಹಣಕಾಸಿನ ಸ್ಥಿರತೆ ಮತ್ತು ಬೆಳವಣಿಗೆಯ ಅವಕಾಶಗಳು ನನ್ನನ್ನು ಸ್ವತಂತ್ರ ಹಾಗೂ ಗೌರವಯುತವಾಗಿಸಿವೆ. ಪ್ರಾಮಾಣಿಕವಾಗಿ ನಾನು ನನ್ನ ಸಮುದಾಯದ ಸದಸ್ಯರಿಗೆ ಸರಿಯಾದ ವೇದಿಕೆ ನಿಮಗೆ ಒದಗಿದಾಗ ಅವಕಾಶವನ್ನು ಪಡೆದುಕೊಳ್ಳಬೇಕು ಮತ್ತು ಅದಕ್ಕೆ ನಿಮ್ಮ ಶ್ರೇಷ್ಠತೆಯನ್ನು ನೀಡಿ ಎಂದು ಹೇಳಲು ಬಯಸುತ್ತೇನೆ” ಎಂದರು.

ಅಮೆಜಾ಼ನ್ ಸಮಾನತೆ, ಸಹಾನುಭೂತಿ, ಜನರಿಗೆ ಗೌರವ ಮತ್ತು ಸಮಾನತಾವಾದಿ ಕೆಲಸದ ವಾತಾವರಣ ಹೊಂದಿದ್ದು ಮಹತ್ತರವಾದ ಉದ್ಯೋಗದ ಸ್ಥಳ ಸೃಷ್ಟಿಸುವಲ್ಲಿ ತನ್ನ ಬದ್ಧತೆಯಿಂದ ಪ್ರೇರಿತವಾಗಿದೆ. ಮಹಿಳೆಯರು ಪೂರ್ವಾಗ್ರಹ ನಿವಾರಿಸುವಲ್ಲಿ ಸದಾ ಮುಂದಿನಿAದ ನೇತೃತ್ವ ವಹಿಸುತ್ತಾರೆ. ಅದಕ್ಕೆ ಸಾಮಾಜಿಕ ನಿಯಮಗಳನ್ನು ಧಿಕ್ಕರಿಸುವ ಧೈರ್ಯ, ಸಾಮರ್ಥ್ಯ ಮತ್ತು ಇಚ್ಛಾಶಕ್ತಿ ಇರಬೇಕು ಮತ್ತು ಈ ಎಲ್ಲ ವರ್ಷಗಳಲ್ಲಿ ಮಹಿಳೆಯರಿಗೆ ಅದನ್ನೇ ಮಾಡಲು ಹೇಳಲಾಗುತ್ತಿದೆ. ಮಹಿಳೆಯರಿಗೆ ಅವರ ಧೈರ್ಯ ಮತ್ತು ಉತ್ಸಾಹಕ್ಕೆ ಗೌರವಿ ಸುವುದು ಈ ಮಹಿಳಾ ದಿನಕ್ಕೆ ನಮ್ಮ ಗುರಿಯಾಗಿದೆ.