Sunday, 15th December 2024

ಲಂಚದ ಆಮಿಷ: ಡಿಸೈನರ್ ವಿರುದ್ಧ ಫಡ್ನವೀಸ್ ಪತ್ನಿ ದೂರು

ವದೆಹಲಿತಮಗೆ ಲಂಚದ ಆಮಿಷವೊಡ್ಡಲು ಬಂದಿದ್ದ ಡಿಸೈನರ್ ವಿರುದ್ಧ ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನವೀಸ್ ಪತ್ನಿ ಅಮೃತಾ ಫಡ್ನವೀಸ್ ಪೊಲೀಸರಿಗೆ ದೂರು ನೀಡಿದ್ದಾರೆ.

ಕ್ರಿಮಿನಲ್ ಪ್ರಕರಣವೊಂದರಲ್ಲಿ ಮಧ್ಯಪ್ರವೇಶಿಸುವುದಕ್ಕಾಗಿ ಆ ಡಿಸೈನರ್ ಅಮೃತಾ ಫಡ್ನವೀಸ್ ಗೆ ಲಂಚದ ಆಮಿಷವೊಡ್ಡಿದ್ದಷ್ಟೇ ಅಲ್ಲದೇ ಅಮೃತಾ ಫಡ್ನವೀಸ್ ಅವರಿಗೇ ಬೆದರಿಕೆ ಹಾಕಲೂ ಮುಂದಾಗಿದ್ದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಅಮೃತಾ ಫಡ್ನವೀಸ್ ದೂರಿನ ಆಧಾರದಲ್ಲಿ ಮಲಬಾರ್ ಹಿಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅನಿಕ್ಷಾ ಎಂಬ ಮಹಿಳೆ ಹಾಗೂ ಆಕೆಯ ತಂದೆಯ ವಿರುದ್ಧ ಫೆ.20 ರಂದು ಎಫ್‌ಐಆರ್ ದಾಖಲಿಸಲಾಗಿದೆ. ಈ ಪ್ರಕರಣದ ಸಂಬಂಧ ಈ ವರೆಗೂ ಯಾರನ್ನೂ ಬಂಧಿಸಲಾಗಿಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಎಫ್‌ಐಆರ್ ಪ್ರಕಾರ ಅನಿಕ್ಷಾ ಎಂಬ ಮಹಿಳೆ ಅಮೃತಾ ಫಡ್ನವೀಸ್ ಅವರೊಂದಿಗೆ 16 ತಿಂಗಳಿನಿಂದ ಸಂಪರ್ಕದಲ್ಲಿದ್ದರು ಹಾಗೂ ಅವರ ನಿವಾಸಕ್ಕೂ ಭೇಟಿ ನೀಡಿದ್ದರು. ಸೈನರ್ ಆಗಿರುವ ಅನಿಕ್ಷಾ, ತಾವು ಡಿಸೈನ್ ಮಾಡಿರುವ ಉಡುಗೆ, ಆಭರಣ, ಪಾದರಕ್ಷೆಗಳನ್ನು ಧರಿಸಿ ಆ ಮೂಲಕ ತಮ್ಮ ಉತ್ಪನ್ನಗಳನ್ನು ಪ್ರಚಾರ ಮಾಡಬೇಕೆಂದು ಅಮೃತಾ ಫಡ್ನವೀಸ್ ಗೆ ಮನವಿ ಮಾಡಿದ್ದರು.