ಸೋಮವಾರ ವಿಚಾರಣೆ ಬಳಿಕ ಕಚೇರಿಯಿಂದ ಕವಿತಾ ಅವರು ವಿಜಯ ಚಿಹ್ನೆಯನ್ನು ತೋರಿ ಸುತ್ತಾ ಹೊರಬಂದು ಇಡಿ ಕಚೇರಿಯಿಂದ ನಿರ್ಗಮಿಸಿದರು. ಇದೀಗ ಮರಳಿ ವಿಚಾರಣೆಗೆ ಹಾಜ ರಾಗುವಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸಮನ್ಸ್ ಜಾರಿ ಮಾಡಿದ್ದು, ಇಂದೂ ಕೂಡ ಕವಿತಾ ಅವರು ವಿಚಾರಣೆಗೆ ಹಾಜರಾಗಬೇಕಿದೆ.
ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರ ಪುತ್ರಿ ಕವಿತಾ ಅವರನ್ನು ಮಾರ್ಚ್ 11 ರಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸುಮಾರು ಒಂಬತ್ತು ಗಂಟೆಗಳ ಕಾಲ ಮೊದಲು ವಿಚಾರಣೆ ನಡೆಸಿದ್ದರು. ಮಾರ್ಚ್ 16 ರಂದು ಅವರಿಗೆ ಮತ್ತೆ ಸಮನ್ಸ್ ಮಾಡಲಾಗಿತ್ತು. ಇಡಿ ಅಧಿಕಾರಿಗಳು ಮಾ.20 ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು.
ಈ ನಡುವೆ ಕವಿತಾ ಅವರ ಅರ್ಜಿಗಳನ್ನು ಸುಪ್ರೀಂಕೋರ್ಟ್ ಮಾರ್ಚ್ 24ರಂದು ವಿಚಾರಣೆ ನಡೆಸಲಿದೆ ಎಂದು ತಿಳಿದುಬಂದಿದೆ.