Friday, 1st November 2024

Brushing Tips: ಹಲ್ಲು ಕ್ಲೀನಾಗಲಿ ಎಂದು ಸಿಕ್ಕಾಪಟ್ಟೆ ಬ್ರಷ್ ಮಾಡುತ್ತಿದ್ದೀರಾ? ಹುಷಾರು!

ಬಾಯಿಯ ಆರೋಗ್ಯವನ್ನು ಕಾಪಾಡಲು ಪ್ರತಿಯೊಬ್ಬರೂ ಪ್ರತಿದಿನ ದಿನಕ್ಕೆ 2 ಬಾರಿ ಹಲ್ಲುಜ್ಜುತ್ತಾರೆ(Brushing Tips). ಇದು ಬಾಯಿಯಲ್ಲಿರುವ ಬ್ಯಾಕ್ಟೀರಿಯಾಗಳನ್ನು ನಾಶ ಮಾಡುತ್ತದೆ ಮತ್ತು ಹಲ್ಲುಗಳ ಆರೋಗ್ಯವನ್ನು ಕಾಪಾಡುತ್ತದೆ. ಆದರೆ ಕೆಲವರು ಹಲ್ಲು ಪಳಪಳ ಹೊಳೆಯಬೇಕು ಹಾಗೂ ಬಾಯಿಯ ದುರ್ವಾಸನೆ ಹೋಗಬೇಕು ಎಂದು ಅತಿಯಾಗಿ ಹಲ್ಲುಗಳನ್ನು ಉಜ್ಜುತ್ತಾರೆ. ಆದರೆ ಈ ರೀತಿ ಮಾಡುವುದು ಸರಿಯೇ? ಇದರಿಂದ ಹಲ್ಲುಗಳಿಗೆ ಸಮಸ್ಯೆಯಾಗುತ್ತದೆಯೇ? ಎಂಬುದಕ್ಕೆ ಇಲ್ಲಿದೆ ನೋಡಿ ಮಾಹಿತಿ.

Brushing Tips

ಬಾಯಿಯ ನೈರ್ಮಲ್ಯವನ್ನು ಕಾಪಾಡಿಕೊಳ್ಳಲು ಹಲ್ಲುಗಳನ್ನು ಉಜ್ಜುವುದು ಅವಶ್ಯಕವಾಗಿದ್ದರೂ ಕೂಡ ಅತಿಯಾಗಿ ಹಲ್ಲುಗಳನ್ನು ಉಜ್ಜುವುದು ಅಥವಾ ಗಟ್ಟಿಯಾದ ಬ್ರಷ್‍ ಬಳಸುವುದು ನಿಮ್ಮ ಹಲ್ಲುಗಳಿಗೆ ಹಾನಿ ಮಾಡುತ್ತದೆಯಂತೆ.  ಇದು ದಂತಕವಚದ ಸವೆತ, ಹಲ್ಲಿನ ಸೂಕ್ಷ್ಮತೆ ಮತ್ತು ಇತರ ಸಮಸ್ಯೆಗಳಿಗೆ ಕಾರಣವಾಗುತ್ತದೆ  ಎಂದು ತಜ್ಞರು ಎಚ್ಚರಿಸಿದ್ದಾರೆ.

ಆಮ್ಲೀಯ ಆಹಾರಗಳು ಮತ್ತು ಪಾನೀಯಗಳು ಹೆಚ್ಚು ಸೇವಿಸುವುದು  ದಂತಕವಚಕ್ಕೆ ಹಾನಿಯಾಗಿ ಹಲ್ಲಿನ ಸವಕಳಿ ಸಮಸ್ಯೆ, ಜುಮ್ಮೆನಿಸುವಿಕೆ, ಹಲ್ಲು ನೋವಿನ ಸಮಸ್ಯೆ  ಕಾಡಬಹುದು ಎಂದು  ಹೈದರಾಬಾದ್‍ನ ಎಫ್ಎಂಎಸ್ ಡೆಂಟಲ್ ಕ್ಲಿನಿಕ್‍ಗಳ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ.ಪಿ.ಪಾರ್ಥಸಾರಥಿ ರೆಡ್ಡಿ ತಿಳಿಸಿದ್ದಾರೆ.

ಸಿಟ್ರಸ್ ಹಣ್ಣುಗಳು, ಸೋಡಾ ಮತ್ತು ಕೆಲವು ಹಣ್ಣಿನ ರಸಗಳಂತಹ ಆಮ್ಲೀಯ ಆಹಾರಗಳು ಮತ್ತು ಪಾನೀಯಗಳು ಬಾಯಿಯ ಪಿಎಚ್ ಮಟ್ಟವನ್ನು ಕಡಿಮೆ ಮಾಡುತ್ತವೆ, ಇವು  ದಂತಕವಚವನ್ನು ಕರಗಿಸುತ್ತವೆ.  ಇದು ಶಾಶ್ವತ ಹಲ್ಲಿನ ಹಾನಿಗೆ ಕಾರಣವಾಗುತ್ತದೆ. ಎಂದು ತಜ್ಞರು ಎಚ್ಚರಿಸಿದ್ದಾರೆ.

Brushing Tips

ಈ ಆಮ್ಲೀಯತೆಯ ಪರಿಣಾಮಗಳನ್ನು ಕಡಿಮೆ ಮಾಡಲು ತಜ್ಞರ ಸಲಹೆಗಳು:
ಆಮ್ಲೀಯ ಆಹಾರವನ್ನು ಸೇವಿಸಿದ ತಕ್ಷಣ ಬ್ರಷ್ ಮಾಡುವುದನ್ನು ತಪ್ಪಿಸಿ. ಇವುಗಳನ್ನು  ಸೇವಿಸಿದ ಕನಿಷ್ಠ ಎರಡು ಗಂಟೆಗಳ ನಂತರ ಬ್ರಷ್ ಮಾಡಬೇಕು ಎಂದು ತಜ್ಞರು ಹೇಳುತ್ತಾರೆ.  

ಹಲ್ಲಿನಲ್ಲಿ ಯಾವುದೇ ಸಮಸ್ಯೆ ಕಂಡುಬಂದರೂ ತಕ್ಷಣ ದಂತವೈದ್ಯರನ್ನು ಸಂಪರ್ಕಿಸಿ. ಯಾಕೆಂದರೆ ಕಡಿಮೆ  ದಂತಕವಚದ ಸವೆತ ಹೊಂದಿರುವವರಿಗೆ, ದಂತವೈದ್ಯರು ಅದರಿಂದಾಗುವ ಹಾನಿಯನ್ನು ಸರಿಪಡಿಸಬಹುದು. ಇಲ್ಲವಾದರೆ ಹೆಚ್ಚು ಚಿಕಿತ್ಸೆಗಳನ್ನು ನೀಡಬೇಕಾಗಿ ಬರಬಹುದು ಎಂದು ತಜ್ಞರು ಹೇಳಿದ್ದಾರೆ.

ಅಲ್ಲದೇ ಸವೆತವನ್ನು ತಡೆಗಟ್ಟಲು, ಮೃದುವಾದ ಬ್ರಷ್‍ಗಳನ್ನು ಬಳಸುವಂತೆ ತಜ್ಞರು ಶಿಫಾರಸು ಮಾಡುತ್ತಾರೆ. ಹಾಗೇ “ಬಾಸ್ ತಂತ್ರ”ವನ್ನು ಬಳಸಲು ಅವರು ಸಲಹೆ ನೀಡುತ್ತಾರೆ. ಬಾಸ್ ತಂತ್ರದ ಪ್ರಕಾರ, ಟೂತ್ ಬ್ರಷ್ ಅನ್ನು 45 ಡಿಗ್ರಿ ಕೋನದಲ್ಲಿ ಹಿಡಿದುಕೊಳ್ಳಬೇಕು ಮತ್ತು ಅದರ ಮುಳ್ಳುಗಳನ್ನು ಒಸಡು ರೇಖೆಯ ಮೇಲೆ ಸ್ವಲ್ಪ ಇರಿಸಿ ಮತ್ತು ವೃತ್ತಾಕಾರದ ಚಲನೆಯಲ್ಲಿ 15 ರಿಂದ 20 ನಿಮಿಷಗಳ ಕಾಲ ನಿಧಾನವಾಗಿ ಬ್ರಷ್ ಮಾಡಬೇಕು.

ಇದನ್ನೂ ಓದಿ:ತ್ವಚೆಯ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಹಾಗಾದ್ರೆ ಕೇಸರಿ ಬಳಸಿ ನೋಡಿ

ಹಲ್ಲುಗಳನ್ನು ರಕ್ಷಿಸುವುದು ಹೇಗೆ?
ಹಲ್ಲಿನ ಸವೆತವನ್ನು ತಡೆಗಟ್ಟಲು ಜೀವನಶೈಲಿಯಲ್ಲಿ ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ. ಆಮ್ಲೀಯ ಆಹಾರಗಳು ಮತ್ತು ಪಾನೀಯಗಳಿಂದ ಸಾಧ್ಯವಾದಷ್ಟು ದೂರವಿರಲು ಡಾ.ರೆಡ್ಡಿ ರೋಗಿಗಳಿಗೆ ಸಲಹೆ ನೀಡುತ್ತಾರೆ. ಅಂತಿಮವಾಗಿ, ನಿಮ್ಮ ಹಲ್ಲುಗಳನ್ನು ರಕ್ಷಿಸಲು ಉತ್ತಮ ಆಹಾರ, ಸರಿಯಾದ ಬ್ರಷ್ ಮಾಡುವ ಅಭ್ಯಾಸ ಮತ್ತು ನಿಯಮಿತ ದಂತ ತಪಾಸಣೆಗಳನ್ನು ಮಾಡಿ ಎಂದು ಡಾ.ರೆಡ್ಡಿ ಹೇಳುತ್ತಾರೆ.