ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಉರಿ ಸೆಕ್ಟರ್‌ನಲ್ಲಿ ನಡೆದ ಕಾರ್ಯಾಚರಣೆಯಲ್ಲಿ ₹ 25 ಕೋಟಿ ಮೌಲ್ಯದ 30 ಕೆ.ಜಿಯಷ್ಟು ನಿಷೇಧಿತ ವಸ್ತುವನ್ನು ಜಪ್ತಿ ಮಾಡಲಾಗಿದೆ.
ಬಾರಾಮುಲ್ಲಾ ಜಿಲ್ಲೆಯ ಉರಿ ಸೆಕ್ಟರ್‌ನಲ್ಲಿ ಗಡಿ ನಿಯಂತ್ರಣ ರೇಖೆ ಬಳಿ ಕೆಲವರು ಅನುಮಾನಾಸ್ಪದವಾಗಿ ಓಡಾಡುತ್ತಿದ್ದುದನ್ನು ಭದ್ರತಾಪಡೆಗಳು ಗಮನಿಸಿ, ಶೋಧ ಕಾರ್ಯ ಕೈಗೊಂಡವು. ಡ್ರಗ್ಸ್ ಹೋಲುವಂತಹ ವಸ್ತುವನ್ನು ಬೀಳಿಸಿದ್ದನ್ನು ಪತ್ತೆ ಹಚ್ಚಿ, ಆ ವಸ್ತುವನ್ನು ವಶಪಡಿಸಿಕೊಳ್ಳಲಾಯಿತು’ ಎಂದು ಹಿರಿಯ ಎಸ್ಪಿ ರಯೀಸ್ ಭಟ್ ತಿಳಿಸಿದರು.
ಎಲ್‌ಒಸಿಯ ಭಾರತದ ಗಡಿಯೊಳಗೆ ಮಾದಕವಸ್ತುವಿನ ಕಳ್ಳಸಾಗಣೆಗೆ ಪೆಡ್ಲರ್‌ಗಳು ಯತ್ನಿಸುತ್ತಿದ್ದರು. ಭದ್ರತಾಪಡೆಗಳು ಕಾರ್ಯಾಚರಣೆಗೆ ಮುಂದಾದ ಕೂಡಲೇ ಕಾಲ್ಕಿತ್ತರು’ ಎಂದೂ ಹೇಳಿದರು.
ಪಾಕಿಸ್ತಾನದ ಗುರುತುಗಳನ್ನು ಹೊಂದಿರುವ, ಒಟ್ಟು 25-30 ಕೆ.ಜಿ ತೂಕದ ಎರಡು ಬ್ಯಾಗ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡಿರುವ ಮಾದಕವಸ್ತು ಯಾವುದು ಎಂಬ ಬಗ್ಗೆ ಪರಿಶೀಲನೆ ನಡೆಯುತ್ತಿದೆ’ ಎಂದರು.