Sunday, 15th December 2024

ಸಾಂಬಾ: ಶಸ್ತ್ರಾಸ್ತ್ರ ಕಳ್ಳಸಾಗಣೆ ವಿಫಲಗೊಳಿಸಿದ ಬಿಎಸ್‌ಎಫ್

ಜಮ್ಮು: ಅಂತರರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನದಿಂದ ಶಸ್ತ್ರಾಸ್ತ್ರಗಳನ್ನು ಕಳ್ಳಸಾಗಣೆ ಮಾಡಲು ಭಯೋತ್ಪಾದಕರು ನಡೆಸಿದ ಪ್ರಮುಖ ಪ್ರಯತ್ನವನ್ನು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಗುರುವಾರ ವಿಫಲಗೊಳಿಸಿದೆ.

ಈ ಮೂಲಕ ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯಲ್ಲಿ ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಬಿಎಸ್‌ಎಫ್‌ ಡಿಐಎಸ್‌ ಎಸ್‌.ಪಿ.ಎಸ್‌ ಸಂಧು ತಿಳಿಸಿದ್ದಾರೆ.

ನಾಲ್ಕು ಪಿಸ್ತೂಲ್‌ಗಳು, ಎಂಟು ಪಿಸ್ತೂಲ್‌ ಮ್ಯಾಗಜಿನ್‌ಗಳು, 232 ಸುತ್ತು ಗುಂಡುಗಳನ್ನು ಬಿಎಸ್‌ಎಫ್‌ ವಶಕ್ಕೆ ಪಡೆದಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಗಡಿಯಾಚೆಗಿನ ಭಯೋತ್ಪಾದಕರು ಶಸ್ತ್ರಾಸ್ತ್ರಗಳು ಮತ್ತು ಮಾದಕ ವಸ್ತುಗಳ ಕಳ್ಳ ಸಾಗಾಣೆಗೆ ಡ್ರೋನ್‌ಗಳನ್ನು ಬಳಸುತ್ತಿರುವುದು ಪತ್ತೆಯಾಗುತ್ತಿದೆ.