Saturday, 14th December 2024

ಬಿಎಸ್‌ಎನ್‌ಎಲ್ ಅನ್ನು ತ್ಯಜಿಸಿದ 18 ದಶಲಕ್ಷ ಗ್ರಾಹಕರು

ವದೆಹಲಿ: ಟೆಲಿಕಾಂ ಸೇವೆ ಪೂರೈಕೆದಾರ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್‌ಎನ್‌ಎಲ್) 18 ದಶಲಕ್ಷದಷ್ಟು ಗ್ರಾಹಕರನ್ನು ಕಳೆದುಕೊಂಡಿದೆ.

ಈಗ BSNL ಗ್ರಾಹಕರ ಸಂಖ್ಯೆ 88.06 ಮಿಲಿಯನ್ ಗೆ ಇಳಿಕೆಯಾಗಿದೆ. ಟ್ರಾಯ್ ನ ಮಾಹಿತಿಯ ಪ್ರಕಾರ, ಸಂಸ್ಥೆ 2024 ರ ಮಾರ್ಚ್ ಒಂದರಲ್ಲೇ 2.3 ಮಿಲಿಯನ್ ಗ್ರಾಹಕರನ್ನು ಕಳೆದುಕೊಂಡಿದೆ.

ಗ್ರಾಹಕರ ಸಂಖ್ಯೆ ಇಳಿಕೆ ತಡೆಗಟ್ಟಲು ಸಾಧ್ಯವಾಗದೇ ಇರುವ ಸಂಸ್ಥೆಗಳ ಪೈಕಿ ವೊಡಾಫೋನ್ ನಂತರದ ಸ್ಥಾನದಲ್ಲಿ ಬಿಎಸ್‌ಎನ್‌ಎಲ್ ಇದೆ.

ಈ ಕುಸಿತಕ್ಕೆ ನೆಟ್‌ವರ್ಕ್ ಅಪ್‌ಗ್ರೇಡ್‌ಗಳಲ್ಲಿನ ಹೂಡಿಕೆಯ ಕೊರತೆ ಕಾರಣವಾಗಿದೆ. BSNL ತನ್ನ ಗ್ರಾಹಕರಿಗೆ ತನ್ನ ಹೈ-ಸ್ಪೀಡ್ 4G ಮತ್ತು 5G ನೆಟ್‌ವರ್ಕ್‌ಗಳನ್ನು ಇನ್ನೂ ಹೊರತಂದಿಲ್ಲ. ವೊಡಾಫೋನ್ ಸಂಸ್ಥೆ ಮಾರ್ಚ್ ತಿಂಗಳಲ್ಲಿ 0.68 ದಶಲಕ್ಷ ಗ್ರಾಹಕರನ್ನು ಕಳೆದುಕೊಂಡಿದೆ.

ಇದಕ್ಕೆ ಪ್ರತಿಯಾಗಿ, ರಿಲಯನ್ಸ್ ಜಿಯೋ ಮತ್ತು ಭಾರ್ತಿ ಏರ್‌ಟೆಲ್ ಕ್ರಮವಾಗಿ 2.14 ಮಿಲಿಯನ್ ಮತ್ತು 1.76 ಮಿಲಿಯನ್ ಹೊಸ ಗ್ರಾಹಕರೊಂದಿಗೆ ಗ್ರಾಹಕರನ್ನು ಗಳಿಸಿವೆ.

BSNL ನ ಮಾರುಕಟ್ಟೆ ಪಾಲು ಮಾರ್ಚ್ 2024 ವೇಳೆಗೆ 7.57% ಕ್ಕೆ ಇಳಿದಿದೆ.

ರಿಲಯನ್ಸ್ ಜಿಯೋ ದೇಶದಲ್ಲಿ 40.30% ನೊಂದಿಗೆ ಅತಿದೊಡ್ಡ ಟೆಲಿಕಾಂ ಸೇವಾ ಪೂರೈಕೆದಾರ ಸಂಸ್ಥೆಯಾಗಿದೆ. ನಂತರದ ಸ್ಥಾನದಲ್ಲಿ ಭಾರ್ತಿ ಏರ್‌ಟೆಲ್ 33.10% ಮತ್ತು ವೊಡಾಫೋನ್ ಐಡಿಯಾ 18.86% ಟೆಲಿಕಾಂ ಮಾರುಕಟ್ಟೆ ಪಾಲನ್ನು ಹೊಂದಿದೆ.

ಏಪ್ರಿಲ್ 2023 ರಲ್ಲಿ, BSNL ತನ್ನ ನೆಟ್‌ವರ್ಕ್ ನ್ನು ತೊರೆದ 2.99 ಮಿಲಿಯನ್ ಚಂದಾದಾರರೊಂದಿಗೆ, ಮೇ 2023 ರಲ್ಲಿ 2.81 ಮಿಲಿಯನ್ ನಷ್ಟು ಗ್ರಾಹಕರ ನಷ್ಟವನ್ನು ಅನುಭವಿಸಿದೆ.