Sunday, 24th November 2024

ಬಿಜೆಪಿ ಸಂಸದೀಯ ಮಂಡಳಿ ಸದಸ್ಯರನ್ನಾಗಿ ಬಿ.ಎಸ್‌.ವೈ, ಬಿ.ಎಲ್‌.ಸಂತೋಷ್‌ ನೇಮಕ

ನವದೆಹಲಿ: ಬಿಜೆಪಿ ಸಂಸದೀಯ ಮಂಡಳಿಯ ಸದಸ್ಯರನ್ನಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹಾಗೂ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ರನ್ನು ನೇಮಕ ಮಾಡಲಾಗಿದೆ.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮಾತನಾಡಿ, ಅಪ್ರತಿಮ ಸಂಘಟಕ ಯಡಿಯೂರಪ್ಪನವರು ಹಾಗೂ ಬಿ.ಎಲ್‌.ಸಂತೋಷ್‌ಗೆ ಈ ಸ್ಥಾನ ಸಿಕ್ಕಿರುವುದು ಸಂತೋಷದ ಸಂಗತಿ ಎಂದರು. ರಾಜ್ಯ ಸರ್ಕಾರದ ಸಾಧನೆಗಳನ್ನು ಮನೆಮನೆಗೆ ತಲುಪಿಸಿ ಪಕ್ಷವನ್ನು ಚುನಾವಣೆಗೆ ಸಿದ್ಧಪಡಿಸುವ ಮಹತ್ಕಾರ್ಯ ಯಡಿಯೂರಪ್ಪನಂಥ ಧುರೀಣರ ಹೆಗಲಿಗೇರಿರುವುದು ರಾಜ್ಯದ ಲಕ್ಷಾಂತರ ಕಾರ್ಯಕರ್ತರಲ್ಲಿ ಹೊಸ ಹುರುಪು ತಂದಿದೆ.

ಪಕ್ಷಕ್ಕಾಗಿ ಅಂದಿಗೂ-ಇಂದಿಗೂ ಸೇವೆ ಸಲ್ಲಿಸುತ್ತಿರುವ ಶ್ರೀ ಯಡಿಯೂರಪ್ಪನವರ ನಾಯಕತ್ವದ ಗುಣ ಹಾಗೂ ಅನುಭವ ಪಕ್ಷದ ಪಾಲಿಗೆ ಅತಿದೊಡ್ಡ ಶಕ್ತಿಯಾಗಿ ಪರಿಣ ಮಿಸಲಿದೆ.

ಸಂಸದೀಯ ಮಂಡಳಿಗೆ ಬಿ. ಎಸ್‌. ಯಡಿಯೂರಪ್ಪ ಹಾಗೂ ಬಿ. ಎಲ್‌. ಸಂತೋಷ್‌ ನೇಮಕವಾಗಿರುವ ವಿಚಾರ ವೈಯಕ್ತಿಕವಾಗಿ ನನಗೆ ಅತ್ಯಂತ ಖುಷಿ ನೀಡಿದ್ದು ಅವರಿಂದ ಮಾರ್ಗದರ್ಶನ ಪಡೆಯಲು ಉತ್ಸುಕನಾಗಿ ಎದುರು ನೋಡುತ್ತಿದ್ದೇನೆ ಎಂದರು.

ನಿತಿನ್ ಗಡ್ಕರಿ ಮತ್ತು ಶಿವರಾಜ್ ಸಿಂಗ್ ಚೌಹಾಣ್ ಅವರನ್ನ ಬಿಜೆಪಿಯ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಿಂದ ಕೈಬಿಡಲಾಗಿದೆ.

ಸಂಸದೀಯ ಮಂಡಳಿಯ ಸದಸ್ಯರ ಪಟ್ಟಿ..!
ಜಗತ್ ಪ್ರಕಾಶ್ ನಡ್ಡಾ (ಅಧ್ಯಕ್ಷ)
ನರೇಂದ್ರ ಮೋದಿ
ರಾಜನಾಥ್ ಸಿಂಗ್
ಅಮಿತ್ ಶಾ
ಬಿ.ಎಸ್. ಯಡಿಯೂರಪ್ಪ
ಸರ್ಬಾನಂದ ಸೋನೊವಾಲ್
ಕೆ ಲಕ್ಷ್ಮಣ್
ಇಕ್ಬಾಲ್ ಸಿಂಗ್ ಲಾಲ್ ಪುರ
ಸುಧಾ ಯಾದವ್
ಬಿ.ಎಲ್. ಸಂತೋಷ್ (ಕಾರ್ಯದರ್ಶಿ)

ಕೇಂದ್ರ ಚುನಾವಣಾ ಸಮಿತಿಯ ಸದಸ್ಯರು
ಜಗತ್ ಪ್ರಕಾಶ್ ನಡ್ಡಾ (ಅಧ್ಯಕ್ಷ)
ನರೇಂದ್ರ ಮೋದಿ
ರಾಜನಾಥ್ ಸಿಂಗ್
ಅಮಿತ್ ಶಾ
ಬಿ.ಎಸ್. ಯಡಿಯೂರಪ್ಪ
ಸರ್ಬಾನಂದ ಸೋನೊವಾಲ್
ಕೆ ಲಕ್ಷ್ಮಣ್
ಇಕ್ಬಾಲ್ ಸಿಂಗ್ ಲಾಲ್ ಪುರ
ಸುಧಾ ಯಾದವ್
ಸತ್ಯನಾರಾಯಣ್ ಜತಿಯಾ
ಭೂಪೇಂದ್ರ ಯಾದವ್
ದೇವೇಂದ್ರ ಫಡ್ನವೀಸ್
ಬಿ.ಎಲ್. ಸಂತೋಷ್ (ಕಾರ್ಯದರ್ಶಿ)
ವಿ ಶ್ರೀನಿವಾಸ್ (ಪದನಿಮಿತ್ತ)