ನವದೆಹಲಿ: ರಾಜ್ಯ ಸಚಿವ ಸಂಪುಟದಲ್ಲಿ ಹೊಸಬರ ಸೇರ್ಪಡೆ ಕುರಿತಂತೆ, ಪಕ್ಷದ ಹೈಕಮಾಂಡ್‍ನಿಂದ ಗ್ರೀನ್ ಸಿಗ್ನಲ್ ಪಡೆಯುವಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಸಫಲರಾಗದೆ, ಬರಿಗೈಯಲ್ಲಿ ಮರಳಿದ್ದಾರೆ.
ಸಂಪುಟ ಪುನಾರಚಣೆಯೋ, ವಿಸ್ತರಣೆಯೋ ಎಂಬುದರ ಜಿಜ್ಞಾಸೆಗೆ ಉತ್ತರ ಕಂಡುಕೊಳ್ಳುವ ಸಲುವಾಗಿ ಯಡಿಯೂರಪ್ಪ ಬುಧವಾರ ಬೆಳಗ್ಗೆಯೇ ನವದೆಹಲಿಗೆ ಪ್ರಯಾಣ ಬೆಳೆಸಿದ್ದರು. ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಕೂಡ ಜತೆಯ ಲ್ಲಿದ್ದರು.
ನವದೆಹಲಿಯಲ್ಲಿ ಪಕ್ಷದ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾರವನ್ನು ಭೇಟಿ ಮಾಡಿದ ಯಡಿಯೂರಪ್ಪ, ತಾವು ಸಿದ್ದಪಡಿಸಿದ ಸಚಿವ ಆಕಾಂಕ್ಷಿಗಳ ಪಟ್ಟಿ ನೀಡಿದ್ದಾರೆ. ಆದರೆ, ಪಟ್ಟಿ ಪರೀಕ್ಷಿಸಲು ಮೂರರಿಂದ ನಾಲ್ಕು ದಿನಗಳ ಕಾಲಾವಕಾಶ ಬೇಕೆಂದು ನಡ್ಡಾ ತಿಳಿಸಿದ್ದು, ಯಡಿಯೂರಪ್ಪ ಬರಿಗೈಯಲ್ಲಿ ನಗರಕ್ಕೆ ವಿಮಾನವೇರಿದರು.
ಈ ಮೂಲಕ ಸಚಿವಾಕಾಂಕ್ಷಿಗಳು ಮತ್ತೊಮ್ಮೆ ನಿರಾಸೆ ಅನುಭವಿಸಬೇಕಾಗಿದೆ. ಮೂಲಗಳ ಪ್ರಕಾರ, ಬಿಜೆಪಿ ಸರಕಾದ ರಚನೆಗೆ ಸಹಕರಿಸಿದ ಮೂವರು ವಲಸಿಗರಿಗೆ ಮಾತ್ರ ಸಂಪುಟದಲ್ಲಿ ಸ್ಥಾನ ಸಿಗುವ ಸಾಧ್ಯತೆ ಇದೆಯೆಂದು ಹೇಳಲಾಗುತ್ತಿದೆ.