ಲಕ್ನೋ: ಉತ್ತರ ಪ್ರದೇಶದ ಲಕ್ನೋದ (Lacknow) ಸಾರಿಗೆ ನಗರದಲ್ಲಿ ಶನಿವಾರ ಸಂಜೆ ಮೂರು ಅಂತಸ್ತಿನ ಕಟ್ಟಡ ಕುಸಿದು (Building Collapse) ಸಾವನ್ನಪ್ಪಿದವರ ಸಂಖ್ಯೆ ಎಂಟಕ್ಕೆ ಏರಿಕೆ ಆಗಿದೆ. ನಿನ್ನೆ ಐವರ ಮೃತದೇಹ ಸಿಕ್ಕಿತ್ತು. ಇಂದು ಮುಂದುವರೆದ ಕಾರ್ಯಾಚರಣೆಯಲ್ಲಿ ರಕ್ಷಣಾ ತಂಡಗಳು ಅವಶೇಷಗಳಿಂದ ಮತ್ತೆ ಮೂರು ದೇಹಗಳನ್ನು ಹೊರತೆಗೆದಿವೆ ಎಂದು ಅಧಿಕಾರಿಗಳು ಭಾನುವಾರ ಖಚಿತಪಡಿಸಿದ್ದಾರೆ.
ಗೋದಾಮುಗಳು ಮತ್ತು ಮೋಟಾರ್ ವರ್ಕ್‌ಶಾಪ್‌ಗಳನ್ನು ಹೊಂದಿದ್ದ ಮೂರು ಅಂತಸ್ತಿನ ಕಟ್ಟಡವು ಶನಿವಾರ ಸಂಜೆ ಕುಸಿದು ಬಿದ್ದಿತ್ತು. ಘಟನೆಯಲ್ಲಿ 28 ಜನ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ರಿಲೀಫ್ ಕಮಿಷನರ್ ಜಿ ಎಸ್ ನವೀನ್ ಪ್ರಕಾರ, ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ಮೂವರು ಮೃತರನ್ನು ರಾಜ್ ಕಿಶೋರ್ (27), ರುದ್ರ ಯಾದವ್ (24), ಮತ್ತು ಜಗರುಪ್ ಸಿಂಗ್ (35) ಎಂದು ಗುರುತಿಸಲಾಗಿದೆ. ಕಾರ್ಯಾಚರಣೆ ಮುಂದುವರೆದಿದೆ ಎನ್ನಲಾಗಿದೆ.
#UPDATE | Death toll in Lucknow Building collapse incident rises to 8
— ANI (@ANI) September 8, 2024
28 people were injured in the incident; a rescue operation is underway pic.twitter.com/ZoexUAIrV9
ಅವಶೇಷಗಳಡಿಯಲ್ಲಿ ಬೇರೆ ಯಾರೂ ಸಿಕ್ಕಿಹಾಕಿಕೊಳ್ಳದಂತೆ ನೋಡಿಕೊಳ್ಳುವತ್ತ ಗಮನಹರಿಸಿದ್ದೇವೆ ಎಂದು ಜಿಲ್ಲಾ ಆಡಳಿತದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಕಟ್ಟಡವನ್ನು ಸುಮಾರು ನಾಲ್ಕು ವರ್ಷಗಳ ಹಿಂದೆ ನಿರ್ಮಿಸಲಾಗಿದ್ದು, ಘಟನೆಯ ಸಮಯದಲ್ಲಿ ಕೆಲವು ನಿರ್ಮಾಣ ಕಾರ್ಯಗಳು ನಡೆಯುತ್ತಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ. ಶನಿವಾರ ಸಂಜೆ 4:45 ಕ್ಕೆ ಘಟನೆ ಸಂಭವಿಸಿದಾಗ ಸಂತ್ರಸ್ತರಲ್ಲಿ ಹೆಚ್ಚಿನವರು ನೆಲ ಮಹಡಿಯಲ್ಲಿ ಕೆಲಸ ಮಾಡುತ್ತಿದ್ದರು.
लखनऊ में एक भवन के गिरने से हुई दुर्घटना का समाचार अत्यंत पीड़ादायक है। मैंने लखनऊ के ज़िलाधिकारी से फ़ोन पर बातचीत करके घटनास्थल पर हालात की जानकारी प्राप्त की है। स्थानीय प्रशासन मौक़े पर राहत एवं बचाव कार्य कर रहा है और पीड़ितों की हरसंभव मदद में जुटा है।
— Rajnath Singh (@rajnathsingh) September 7, 2024
ಗಾಯಾಳುಗಳನ್ನು ಜಿಲ್ಲೆಯ ಲೋಕ ಬಂಧು ಆಸ್ಪತ್ರೆ ಸೇರಿದಂತೆ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಅಧಿಕಾರಿಗಳ ಪ್ರಕಾರ, ಕಟ್ಟಡವು ಕೆಳ ಮಹಡಿಯಲ್ಲಿ ಮೋಟಾರ್ ವರ್ಕ್‌ಶಾಪ್ ಮತ್ತು ಗೋದಾಮು, ಮೊದಲ ಮಹಡಿಯಲ್ಲಿ ವೈದ್ಯಕೀಯ ಗೋದಾಮು ಮತ್ತು ಎರಡನೇ ಮಹಡಿಯಲ್ಲಿ ಕಟ್ಲೇರಿ ಗೋದಾಮು ಇತ್ತು.
ಕಟ್ಟಡದ ಪಿಲ್ಲರ್ ಬಿರುಕು ಬಿಟ್ಟಿದೆ ಎಂದು ವೈದ್ಯಕೀಯ ಗೋಡೌನ್‌ನಲ್ಲಿ ಕೆಲಸ ಮಾಡುತ್ತಿದ್ದ ಮತ್ತು ಗಾಯಗೊಂಡವರಲ್ಲಿ ಒಬ್ಬರಾಗಿರುವ ಆಕಾಶ್ ಸಿಂಗ್ ಹೇಳಿದ್ದಾರೆ. ಮಳೆಯಾಗುತ್ತಿದ್ದರಿಂದ ನಾವು ನೆಲ ಮಹಡಿಗೆ ಬಂದಿದ್ದೇವೆ. ಕಟ್ಟಡದ ಪಿಲ್ಲರ್ ಬಿರುಕು ಬಿಟ್ಟಿರುವುದನ್ನು ಗಮನಿಸಿದ್ದೇವೆ. ಏಕಾಏಕಿ ಇಡೀ ಕಟ್ಟಡವೇ ನಮ್ಮ ಮೇಲೆ ಕುಸಿದು ಬಿದ್ದಿದೆ ಎಂದು ಹೇಳಿದರು.
ಈ ಸುದ್ದಿಯನ್ನೂ ಓದಿ: Building Collapse :1 3 ಅಂತಸ್ತಿನ ಕಟ್ಟಡ ಕುಸಿದು 5 ಮಂದಿ ಸಾವು, ಹಲವರಿಗೆ ಗಾಯ