Sunday, 15th December 2024

ನದಿಯಲ್ಲಿ ಸ್ನಾನ: ಇಬ್ಬರು ಸಹೋದರರ ಸಾವು

ಬುಲಂದ್‌ಶಹರ್(ಉತ್ತರ ಪ್ರದೇಶ): ಜನ್ಮದಿನದ ಆಚರಣೆ ವೇಳೆ ಗಂಗಾ ನದಿಯಲ್ಲಿ ಸ್ನಾನ ಮಾಡುವ ಸಂದರ್ಭ ಇಬ್ಬರು ಸಹೋದರರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಮೃತರನ್ನು ಲಕ್ಷ್ಯ(19) ಹಾಗೂ ಅಭಿಷೇಕ್ (22) ಎಂದು ಗುರುತಿಸಲಾಗಿದೆ. ಲಕ್ಷ್ಯ ಜನ್ಮದಿನದ ಸಂಭ್ರಮದಲ್ಲಿದ್ದರು.

ಮಾಸ್ತರಮ್‌ ಘಾಟ್‌ನ ಗಂಗಾ ನದಿಯಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ಸಹೋದರರಿಬ್ಬರೂ ಆಳಕ್ಕೆ ಜಾರಿ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಈಜುಗಾರರ ಸಹಾಯದಿಂದ ಮೃತ ದೇಹಗಳನ್ನು ನದಿಯಿಂದ ಹೊರತೆಗೆಯಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.