Sunday, 15th December 2024

ಐಐಟಿ ಕ್ಯಾಂಪಸ್‌’ನಲ್ಲಿ ಉಪನ್ಯಾಸಕರ ಸುಟ್ಟ ದೇಹ ಪತ್ತೆ

ಚೆನ್ನೈ: ಉಪನ್ಯಾಸಕರ ಸುಟ್ಟ ದೇಹವೊಂದು ಮದ್ರಾಸ್ ನ ಇಂಡಿಯನ್ ಇನ್ಸ್ ಟಿಟ್ಯೂಟ್ ಆಫ್ ಟೆಕ್ನಾಲಜಿ(ಐಐಟಿ)ಯ ಆವರಣದಲ್ಲಿ ಪತ್ತೆಯಾಗಿದೆ. ಐಐಟಿಯ ಕ್ರೀಡಾ ಅಧಿಕಾರಿ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಮೃತ ವ್ಯಕ್ತಿಯನ್ನು ಉನ್ನಿಕೃಷ್ಣನ್ ನಾಯರ್ (30) ಎಂದು ಗುರುತಿಸಲಾಗಿದೆ. 2021ರ ಏಪ್ರಿಲ್ ನಲ್ಲಿ ಬಿ.ಟೆಕ್ ಪೂರ್ಣಗೊಳಿಸಿದ ನಂತರ ಮದ್ರಾಸ್ ಐಐಟಿಯಲ್ಲಿ ಪ್ರಾಜೆಕ್ಟ್ ಅಸೋಸಿಯೇಟ್ ಮತ್ತು ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದರು ಎಂದು ವರದಿಯಾಗಿದೆ.

ನಾಯರ್ ಕೇರಳದಿಂದ ಬಂದಿದ್ದರು. ವಿದ್ಯಾರ್ಥಿಗಳು ಕ್ರೀಡಾಭ್ಯಾಸ ನಡೆಸಲು ಹಾಕಿ ಮೈದಾನಕ್ಕೆ ಬಂದ ಸಂದರ್ಭದಲ್ಲಿ ಸುಟ್ಟುಹೋದ ಶವ ಪತ್ತೆಯಾಗಿತ್ತು ಎನ್ನಲಾಗಿದೆ. ಕೊಟ್ಟೂರ್ಪುರಂ ಪೊಲೀ ಸರು ಶವವನ್ನು ಮರಣೋತ್ತರ ಪರೀಕ್ಷೆಗಾಗಿ ರಾಯಪೆಟ್ಟಾ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ.

ನಾಯರ್ ವಾಸವಾಗಿದ್ದ ರೂಂನಲ್ಲಿ 11 ಪುಟಗಳ ಸೂಸೈಡ್ ನೋಟ್ ಸಿಕ್ಕಿದ್ದು, ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.