ರಾಜಸ್ಥಾನ್: ವಿದ್ಯುತ್ ತಂತಿ ತಗುಲಿ ಬಸ್ಗೆ ಬೆಂಕಿ ಬಿದ್ದ ಪರಿಣಾಮ 8 ಜನರು ಸಾವಿಗೀಡಾಗಿದ್ದು, 20 ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಶನಿವಾರ ತಡರಾತ್ರಿ ಜಲೋರ್ ಜಿಲ್ಲೆಯ ಮಹೇಶಪುರದಲ್ಲಿ ನಡೆದಿದೆ.
ಪ್ರವಾಸಿಗರು ಎರಡು ಬಸ್ಗಳಲ್ಲಿ ತೆರಳುತ್ತಿದ್ದರು. ಈ ವೇಳೆ ಚಾಲಕನಿಗೆ ದಾರಿ ತಿಳಿಯದೆ ತಪ್ಪಾದ ದಾರಿ ಎಂದು ತಿಳಿದು ವಾಪಸ್ ಬರಲು ಮುಂದಾದ ವೇಳೆ ವಿದ್ಯುತ್ ತಂತಿ ಬಸ್ಗೆ ತಗುಲಿ ಬೆಂಕಿ ಕಾಣಿಸಿಕೊಂಡಿದೆ.
ಅಪಘಾತದಲ್ಲಿ ಕಂಡಕ್ಟರ್ ಸುಟ್ಟು ಕರಕಲಾಗಿದ್ದಾನೆ. ಪ್ರಯಾಣಿಕರು ನಿಕೋಡಾಜಿ ಮತ್ತು ಮಂಡೋಲಿ ನಗರಕ್ಕೆ ಪ್ರಯಾಣಿಸಿದ ನಂತರ ಬೀವರ್ಗೆ ಹಿಂದಿರುಗುತ್ತಿದ್ದರು. ಗಾಯಗೊಂಡವರನ್ನು ಸ್ಥಳೀಯರು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ.