Sunday, 15th December 2024

ವಿದ್ಯುತ್ ತಂತಿ ತಗುಲಿ ಬಸ್​ಗೆ ಬೆಂಕಿ: ಎಂಟು ಸಾವು, 20 ಜನರಿಗೆ ಗಾಯ

ರಾಜಸ್ಥಾನ್: ವಿದ್ಯುತ್ ತಂತಿ ತಗುಲಿ ಬಸ್​ಗೆ ಬೆಂಕಿ ಬಿದ್ದ ಪರಿಣಾಮ 8 ಜನರು ಸಾವಿಗೀಡಾಗಿದ್ದು, 20 ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಶನಿವಾರ ತಡರಾತ್ರಿ ಜಲೋರ್ ಜಿಲ್ಲೆಯ ಮಹೇಶಪುರದಲ್ಲಿ ನಡೆದಿದೆ.

ಪ್ರವಾಸಿಗರು ಎರಡು ಬಸ್​ಗಳಲ್ಲಿ ತೆರಳುತ್ತಿದ್ದರು. ಈ ವೇಳೆ ಚಾಲಕನಿಗೆ ದಾರಿ ತಿಳಿಯದೆ ತಪ್ಪಾದ ದಾರಿ ಎಂದು ತಿಳಿದು ವಾಪಸ್ ಬರಲು ಮುಂದಾದ ವೇಳೆ ವಿದ್ಯುತ್​ ತಂತಿ ಬಸ್​ಗೆ ತಗುಲಿ ಬೆಂಕಿ ಕಾಣಿಸಿಕೊಂಡಿದೆ.

ಅಪಘಾತದಲ್ಲಿ ಕಂಡಕ್ಟರ್ ಸುಟ್ಟು ಕರಕಲಾಗಿದ್ದಾನೆ. ಪ್ರಯಾಣಿಕರು ನಿಕೋಡಾಜಿ ಮತ್ತು ಮಂಡೋಲಿ ನಗರಕ್ಕೆ ಪ್ರಯಾಣಿಸಿದ ನಂತರ ಬೀವರ್‌ಗೆ ಹಿಂದಿರುಗುತ್ತಿದ್ದರು. ಗಾಯಗೊಂಡವರನ್ನು ಸ್ಥಳೀಯರು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ.